Tuesday, April 29, 2025
Google search engine
Homeಜಿಲ್ಲಾಡಾ. ಗಜಾನನ ಕಾಂಬಳೆ ಅವರಿಗೆ ಪ್ರೈಡ ಆಫ್ ಇಂಡಿಯಾ (ಭಾರತ ಗೌರವ ಪುರಸ್ಕಾರ) ಬಿರುದು ನೀಡಿ...
spot_img

ಡಾ. ಗಜಾನನ ಕಾಂಬಳೆ ಅವರಿಗೆ ಪ್ರೈಡ ಆಫ್ ಇಂಡಿಯಾ (ಭಾರತ ಗೌರವ ಪುರಸ್ಕಾರ) ಬಿರುದು ನೀಡಿ ಪ್ರಶಸ್ತಿ ಪ್ರದಾನ …!

ಪಣಜಿ: ಭಾರತ ಸರ್ಕಾರದ ಮಾನ್ಯತ ಪಡೆದ ಇಂಟರ್ ನ್ಯಾಷನಲ್ ಹ್ಯುಮನ ದೇವಲೆಪ್ಪಮೆಂಟ ಕೌನ್ಸಿಲ ಇವರ ವತಿಯಿಂದ ಫೆಬ್ರುವರಿ 15 ರಂದು ಪಣಜಿಯಲ್ಲಿ ನಡೆದ ಇಂಟರನ್ಯಾಷನಲ್ ಗ್ಲೋಬಲ್ ಐಕಾನ್ ಅಜೀವರ ಅವಾರ್ಡ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಕಾರ್ಯಾಲಯದಲ್ಲಿ ಸ್ವಚ್ಛತೆ ಹಾಗೂ ಸೌಂದರ್ಯಕರಣಗೊಳಿಸಿ ಆಡಳಿತ ಕ್ಷೇತ್ರ ಸಮಾಜ ಸೇವೆಯಲ್ಲಿ ಸಕ್ರಿಯವಾಗಿರುವ ಬೆಳಗಾವಿ ನಗರ ರಹವಾಸಿಯಾದ ಡಾ. ಗಜಾನನ ಕಾಂಬಳೆ ಅವರಿಗೆ ಪ್ರೈಡ ಆಫ್ ಇಂಡಿಯಾ (ಭಾರತ ಗೌರವ ಪುರಸ್ಕಾರ) ಬಿರುದು ನೀಡಿ ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಪ್ರತಾಫ ಸಿಂಗ್ ತಿವಾರಿ, ಡಾ. ಸಿದ್ದಗಂಗಮ, ಸಿದ್ದನ್ನಾ ಮೇಟಿ, ಡಾ. ಕೆ. ಶವರಾಮಯ್ಯ, ಡಾ. ಬಿ.ವಿ ಪದ್ಮಾವತಿ, ಡಾ. ಶಶಿಕಲಾ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವರು, ಅಂಬಗರ ಚೌಡಯ್ಯ ನಿಗಮದ ಅಧ್ಯಕ್ಷರಾದ ಬಾಬುರಾವ ಚಿಂಚನಸೂರ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕಾರತರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ವಿವಿಧ ದಲಿತ ಸಂಘಟನೆ ಪದಾಧಿಕಾರಿಗಳು, ಸಂಘ ಸಂಸ್ಥೆ ಪೌಂಡೇಶನ ಪದಾಧಿಕಾರಿಗಳಿಂದ ಅಭಿನಂದನೆಗಳು ಸಲ್ಲಿಸಿದರು.
***

RELATED ARTICLES
- Advertisment -spot_img

Most Popular

error: Content is protected !!