ಬೆಳಗಾವಿ: ರಾಜ್ಯದಲ್ಲಿ ಗ್ರಾಮ ಆಡಳಿತಾಧಿಕಾರಿಗಳ 2 ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಗ್ರಾಮ ಆಡಳಿತಾಧಿಕಾರಿಗಳು ಬೆಳಗಾವಿ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಮೊದಲನೇ ಹಂತದಲ್ಲಿ ಬೇಡಿಕೆಗಳು ಈಡೇರಿಲ್ಲ :
ಕಾರ್ಯನಿರ್ವಹಿಸುವ ಕ್ಷೇತ್ರದಲ್ಲಿ ಸ್ವಂತ ಕೊಠಡಿಗಳ ನಿರ್ಮಾಣ ಮಾಡುವುದು, ಮಹಿಳೆ ಗ್ರಾ.ಅಧಿಕಾರಿಗಳ ಸುರಕ್ಷತೆ ಸೌಲಭ್ಯ, ವರ್ಗಾವಣೆ, ಮುಂಬಡ್ತಿ ಹೀಗೆ ಹಲವು ಬೇಡಿಕೆಗಳನ್ನು ಈಗಾಗಲೇ ಮೊದಲನೇ ಹಂತದ ಮುಷ್ಕರದಲ್ಲಿ ರಾಜ್ಯ ಸರ್ಕಾರದ ಮುಂದೆ ಇಡಲಾಗಿತ್ತು.
ಆಗ ಸರ್ಕಾರವು ಮಧ್ಯಸ್ಥಿಕೆ ವಹಿಸಿ ಸರ್ಕಾರದ ಕಾರ್ಯದರ್ಶಿ, ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಅಧ್ಯಕ್ಷರು, ಹಿರಿಯ ಜಿಲ್ಲಾಧಿಕಾರಿಗಳ ಒಳಗೊಂಡ ಒಂದು ತಂಡ ರಚನೆ ಮಾಡಿ ಹಂತ ಹಂತವಾಗಿ
ಬೇಡಿಕೆಗಳನ್ನು ಈಡೇರಿಸಲು ಭರವಸೆ ನೀಡಿರುವುದರಿಂದ ಮುಷ್ಕರವನ್ನು ಮುಟುಕುಗೊಳಿಸಲಾಗಿತ್ತು.
ಆದರೆ ಯಾವುದೇ ರೀತಿಯ ಬೇಡಿಕೆಗಳು ಈಡೇರಿಸಿರುವುದಿಲ್ಲ ಎಂದು ರಾಜ್ಯದಾದ್ಯಂತ 2ನೇ ಹಂತದ ಅನಿರ್ದಿಷ್ಟ ಅವಧಗೆ ಮುಷ್ಕರಕ್ಕೆ ಮತ್ತೆ ಕರೆ ನೀಡಲಾಗಿದೆ ಎಂದು ಬೆಳಗಾವಿ ಗ್ರಾ.ಆಡಳಿತ ಅಧಿಕಾರಿಗಳಾದ ಅಧ್ಯಕ್ಷ ಎಸ್ ಪಿ ಶಿಂಧೆ ಅವರು ತಿಳಿಸಿದರು.