ಅಥಣಿ :ಬಹಳ ಕುತಹಲ ಕೆರಳಿಸಿದ್ದ ಅಥಣಿ ಗ್ರಾಮೀಣ ಸಂಕೋನಟ್ಟಿ ಗ್ರಾಮ ಪಂಚಾಯತಿ ಅದ್ಯಕ್ಷ ಸ್ಥಾನದ ಚುಣಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗ ಶಂಕರ ಗಡದೆ ನೂತನ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಅವಿಶ್ವಾಸ ಗೋತ್ತುವಳಿ ಮೂಲಕ ತೆರವಾಗಿದ್ದ ಗ್ರಾಮ ಪಂಚಾಯತಿ ಅದ್ಯಕ್ಷ ಹುದ್ದೆಗೆ ಇಂದು ನಡೆದ ಚುಣಾವಣೆಯಲಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗ ಶಂಕರ ರಾಮು ಗಡದೆ ಆಯ್ಕೆಯಾಗಿದ್ದು ಅಥಣಿ ಗ್ರಾಮೀಣ ಸಂಕೋನಟ್ಟಿ ಗ್ರಾಮ ಪಂಚಾಯತಿ ಅದ್ಯಕ್ಷ ಸ್ಥಾನ ಚುನಾವಣೆಯಲ್ಲಿ ಸವದಿ ಬೆಂಬಲಿಗರು ಮೇಲುಗೖ ಸಾಧಿಸಿದ್ದಾರೆ
ಒಟ್ಟು 56 ಸದಸ್ಯರ ಪೖಕಿ 53 ಸದಸ್ಯರು ಚುನಾವಣೆ ಪ್ರಕ್ರೀಯೆಯಲ್ಲಿ ಮತಚಲಾಯಿಸಿದ್ದು 53 ಮತಗಳ ಪೖಕಿ 43 ಮತಗಳನ್ನ ಪಡೆದು ಶಂಕರ ರಾಮು ಗಡದೆ ಬಹುಮತದಿಂದ ಆಯ್ಕೆಯಾಗಿದ್ದಾರೆ ಇನ್ನೂ ಹತ್ತು ಮತ ಪಡೆದು ಪರಾಭವಗೊಂಡಿರುವ ಅಭ್ಯರ್ಥಿ ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಸಂತೋಷ ಕಕಮರಿ ಇದೊಂದು ಕಾನೂನು ಬಾಹಿರ ಚುನಾವಣೆ ಆಗಿದ್ದು ಶಂಕರ ಗಡದೆ ಇವರು ಸಹಕಾರಿ ಸಂಘದಲ್ಲಿ ಪ್ರನಿರ್ವಾಹಣಾಧಿಕಾರಿಯಾಗಿ ಪ್ರಸ್ತೂತ ಕಾರ್ಯನಿರ್ವಹಿಸುತ್ತಿದ್ದು ಈ ಕುರಿತು ಚುಣಾವಣಾ ಅಧಿಕಾರಿಗಳಿಗೆ ಸಂಬಧಪಟ್ಟ ದಾಖಲೆ ಮತ್ತು ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿದರು ಅದನ್ನ ಪರಿಗಣಿಸದೆ ಚುಣಾವಣೆ ಪ್ರಕ್ರೀಯೆ ನಡೆಸಿದ್ದಾರೆ ಎಂಬ ಗಂಭಿರ ಆರೋಪ ಮಾಡಿದ್ದಾರೆ ಇದರ ವಿರುದ್ದ ನಾವು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು
ನೂತನ ಅದ್ಯಕ್ಷ್ಯರಾಗಿ ಆಯ್ಕಯಾದ ಶಂಕರ ಗಡದೆ ಅವರಿಗೆ ಸದಸ್ಯರು ಮತ್ತು ಅಭಿಮಾನಿ ಬಳಗ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು
ಚುನಾವಣೆ ಅಧಿಕಾರಿಗಳಾಗಿ ಶಿವಾನಂದ ಕಲ್ಲಾಪೂರ ಕಾರ್ಯ ನಿರ್ವಹಿಸಿದ್ದರು