Tuesday, April 29, 2025
Google search engine
Homeಅಂಕಣನಿಮ್ಮಪ್ಪನ ಸಿಎಂ ಮಾಡಲು ನಾನು ಶಾಸಕ ಸ್ಥಾನ ತ್ಯಾಗ ಮಾಡಿದ್ದೇನೆ: ವಿಜಯೇಂದ್ರ ವಿರುದ್ಧ ರಮೇಶ್ ಜಾರಕಿಹೊಳಿ...
spot_img

ನಿಮ್ಮಪ್ಪನ ಸಿಎಂ ಮಾಡಲು ನಾನು ಶಾಸಕ ಸ್ಥಾನ ತ್ಯಾಗ ಮಾಡಿದ್ದೇನೆ: ವಿಜಯೇಂದ್ರ ವಿರುದ್ಧ ರಮೇಶ್ ಜಾರಕಿಹೊಳಿ ತಿರುಗೇಟು..!!

ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಿಮ್ಮಪ್ಪನ ಮುಖ್ಯಮಂತ್ರಿ ಮಾಡಲು ನಾನು ಶಾಸಕ ಸ್ಥಾನ ತ್ಯಾಗ ಮಾಡಿದ್ದೆ ಎಂದು ಶನಿವಾರ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ನಾಲಿಗೆ ಬಿಗಿ ಹಿಡಿದು ಮಾತಾಡಿ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ.

ಇಂದು ಬೆಳಗಾವಿ ಜಿಲ್ಲೆಯ ಅಂಕಲಗಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ರಮೇಶ್ ಜಾರಕಿಹೊಳಿ, ನಾನು ನಿಮ್ಮಪ್ಪನ್ನೇ ಸಿಎಂ ಮಾಡೋದಕ್ಕೆ ಬಿಜೆಪಿಗೆ ಬಂದಿದ್ದು ವಿಜಯೇಂದ್ರಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ವಿಜಯೇಂದ್ರ ನೀನು ಇನ್ನೂ ಬಚ್ಚಾ ಇದ್ದೀಯಾ ರಾಜ್ಯಾಧ್ಯಕ್ಷ ಆಗೋದಕ್ಕೆ ನೀನಗೆ ಯೋಗ್ಯತೆಯಿಲ್ಲ. ಯಡಿಯೂರಪ್ಪ ಬಗ್ಗೆ ನನಗೆ ಈಗಲೂ ಗೌರವವಿದೆ. ಅಗೌರವದಿಂದ ಮಾತನಾಡಿಲ್ಲ. ಈಗಲೂ ಯಡಿಯೂರಪ್ಪ ನಮ್ಮ‌ ನಾಯಕರಿದ್ದಾರೆ ಎಂದರು.

ವಿಜಯೇಂದ್ರ ನೀನೆ ಡೇಟ್ ಫಿಕ್ಸ್ ಮಾಡು, ನಾನು ಶಿಕಾರಿಪುರದಲ್ಲಿ ನಿಮ್ಮ ಮನೆ ಮುಂದಿನಿಂದಲೇ ರಾಜ್ಯ ಪ್ರವಾಸ ಶುರುಮಾಡುತ್ತೇನೆ. ನಿನ್ನ ಸವಾಲನ್ನು ನಾನು ಸ್ವೀಕಾರ ಮಾಡಿರುವೆ, ನಾನು ಬರುವಾಗ ಪೊಲೀಸರು, ಗನ್ ಮ್ಯಾನ್ ತರಲ್ಲ, ಒಬ್ಬನೆ ಬರ್ತೇನೆ. ತಾಕತ್ತಿದ್ದರೆ ತಡಿ ನೋಡೋಣ ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ರಮೇಶ್ ಜಾರಕಿಹೊಳಿಯವರಿಗೆ ಓಡಾಡಲು ಕಷ್ಟವಾಗುತ್ತದೆ ಎಂದಿದ್ದ ವಿಜಯೇಂದ್ರಾಗೆ ಸವಾಲು ಹಾಕಿದರು.

ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಗೌರವವಿದೆಯೇ ಹೊರತು ವಿಜಯೇಂದ್ರ ಬಗ್ಗೆ ಇಲ್ಲ. ನಾನು ಓಡಾಡೋಕೆ ಆಗೋದಿಲ್ಲ ಎಂದಿರುವೆ. ಆದರೆ, ನಿನ್ನನ್ನು ಓಡಾಟ ಮಾಡದ ಹಾಗೆ ಮಾಡೋ ತಾಕತ್ತು ನನಗೆ ದೇವರು ಕೊಟ್ಟಿದ್ದಾನೆ. ಆದರೆ, ನಾನು ಹಾಗೆ ಮಾಡೋದಿಲ್ಲ ಎಂದು ಹೇಳಿದರು.

ಇವತ್ತು ನಾನು ಯಡಿಯೂರಪ್ಪಗೆ ಸಲಹೆ ಕೊಡುವೆ. ಯಡಿಯೂರಪ್ಪ‌ ನೀವು ವಿಜಯೇಂದ್ರ ಬೆನ್ನು ಹತ್ತಿ ಹಾಳಾಗುತ್ತಿದ್ದೀರಿ. ಒಳ್ಳೆಯ ಅಧ್ಯಕ್ಷರನ್ನು ನೇಮಕ ಮಾಡೋದಕ್ಕೆ ಸಹಕಾರ ಕೊಡಿ, ಪದೇ ಪದೇ ಸೈಕಲ್ ನಿಂದ ಓಡಾಟ ಮಾಡಿದ್ದೇನೆ ಎನ್ನಬೇಡಿ. ಪಕ್ಷದಿಂದ ಅದರ ಸಾವಿರ ಪಟ್ಟು ಲಾಭವನ್ನ ಪಡೆದಿರುವಿರಿ ಎಂದು ವಾಗ್ದಾಳಿ ನಡೆಸಿದರು.

RELATED ARTICLES
- Advertisment -spot_img

Most Popular

error: Content is protected !!