Tuesday, April 29, 2025
Google search engine
Homeಸುದ್ದಿಮಾಜಿ ಡಿಸಿ ಬಿ.ಎ. ಕ್ಹುಟಿನೋ ಅಂತಿಮ ದರ್ಶನ ಪಡೆದ ಸಚಿವ ಸತೀಶ್‌ ಜಾರಕಿಹೊಳಿ
spot_img

ಮಾಜಿ ಡಿಸಿ ಬಿ.ಎ. ಕ್ಹುಟಿನೋ ಅಂತಿಮ ದರ್ಶನ ಪಡೆದ ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಶುಕ್ರವಾರ ಜನಪ್ರಿಯ, ದಕ್ಷ ಐಎಎಸ್ ಅಧಿಕಾರಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ವಿಭಾಗದ ಡಿವಿಜನಲ್ ಕಮಿಷನರ್ ಸಹ ಆಗಿದ್ದ ಬೆವಿಸ್ ಅಂಗೆಲೊ ಕ್ಹುಟಿನೊ(ಬಿ. ಎ. ಕ್ಹುಟಿನೊ) ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

 

ಹನುಮಾನ ನಗರದ ಅವರ ನಿವಾಸದಲ್ಲಿ ಗಣ್ಯರಿಗೆ ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇಂದು ಸಚಿವ ಸತೀಶ್‌ ಜಾರಕಿಹೊಳಿ ಸೇರಿದಂತೆ ಇತರರು ಗಣ್ಯರು ಭೇಟಿ ನೀಡಿ ಮಾಜಿ ಡಿಸಿ ಬಿ.ಎ. ಕ್ಹುಟಿನೋ ಪಾರ್ಥಿವ ಶರೀರ‌್ ಕ್ಕೆ ಅಂತಿಮ ನಮನ ಸಲ್ಲಿಸಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಮೂಲಕ ಧೈರ್ಯ ತುಂಬಿದರು. ಅಲ್ಲದೇ ಸಚಿವ ಸತೀಶ್‌ ಜಾರಕಿಹೊಳಿ ಅವರು ಇವರ ಕಾರ್ಯ ವೈಖರಿ ಬಗ್ಗೆ ಅಲ್ಲೇ ಇದ್ದ ಮುಖಂಡರ ಎದುರು ಮೆಲುಕು ಹಾಕಿದರು.

 

 

ಜನಪ್ರಿಯ, ದಕ್ಷ ಐಎಎಸ್ ಅಧಿಕಾರಿ ಕ್ಹುಟಿನೋ: ಬೆವಿಸ್ ಅಂಗೆಲೊ ಕ್ಹುಟಿನೊ ಅವರು, ಜನಪ್ರಿಯ ಹಾಗೂ ದಕ್ಷ ಐಎಎಸ್ ಅಧಿಕಾರಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ವಿಭಾಗದ ಡಿವಿಜನಲ್ ಕಮಿಷನರ್ ಸಹ ಆಗಿದ್ದರು. ಇವರು ಭಾರತೀಯ ಆಡಳಿತಾತ್ಮಕ ಸೇವೆಗೆ ದಕ್ಷತೆ ಮತ್ತು ಹೆಚ್ಚಿನ ಅರ್ಥ ತಂದುಕೊಟ್ಟಿದ್ದ ಜನಪ್ರಿಯ ಅಧಿಕಾರಿ ಕೂಡಾ ಆಗಿದ್ದರು. ನಿವೃತ್ತಿ ನಂತರ ಬೆಳಗಾವಿ ಹನುಮಾನ ನಗರದಲ್ಲಿ ವಾಸವಾಗಿದ್ದರು. ಆದರೆ ದೀರ್ಘಕಾಲದ ಅನಾರೋಗ್ಯದಿಂದ ಅವರು ತಮ್ಮ ಹನುಮಾನ ನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ವಿವಿಧ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಈ ವೇಳೆ ಶಾಸಕ ರಾಜು ಸೇಠ್‌, ಮಾಜಿ ಶಾಸಕ ಶಾಮ್‌ ಘಾಟಗೆ, ಮಾಜಿ ಸಚಿವ ವೀರಕುಮಾರ ಪಾಟೀಲ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೋನಕೇರಿ, ಆಸಿಫ್ ಮುಲ್ಲಾ, ಲೂಯಿಸ್‌ ಸೇರಿದಂತೆ ಇತರರು ಮುಖಂಡರು ಇದ್ದರು.

RELATED ARTICLES
- Advertisment -spot_img

Most Popular

error: Content is protected !!