Monday, January 13, 2025
Google search engine
Homeಅಂಕಣಮಾರಿಹಾಳದಿಂದ ತುಮ್ಮರಗುದ್ದಿ ರಸ್ತೆ ಕಾಮಗಾರಿಗೆ ಚಾಲನೆ…!!
- Advertisment -spot_img

ಮಾರಿಹಾಳದಿಂದ ತುಮ್ಮರಗುದ್ದಿ ರಸ್ತೆ ಕಾಮಗಾರಿಗೆ ಚಾಲನೆ…!!

ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾರಿಹಾಳ ಗ್ರಾಮದಿಂದ ತುಮ್ಮರಗುದ್ದಿ ಗ್ರಾಮದವರೆಗಿನ ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಚಾಲನೆ ನೀಡಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಹಣ ಮಂಜೂರಾಗಿದ್ದು, ಸುಮಾರು 3 ಕೋಟಿ ರೂ,ಗಳ ವೆಚ್ಚದಲ್ಲಿ ರಸ್ತೆಯ ಡಾಂಬರೀಕರಣ ನಡೆಯಲಿದೆ. ಕಾಮಗಾರಿಗೆ ಚಾಲನೆ ನೀಡಿ, ಗುಣಮಟ್ಟದ ಕಾಮಗಾರಿ ನಡೆಸುವಂತೆ ಮತ್ತು ನಿಗದಿತ ಸಮಯದಲ್ಲಿ ರಸ್ತೆ ಪೂರ್ಣಗೊಳಿಸುವಂತೆ ಗುತ್ತಿಗೆದಾರಿಗೆ ಮೃಣಾಲ ಹೆಬ್ಬಾಳಕರ್ ಸೂಚಿಸಿದರು.

ಈ ಸಮಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಿರಿಜಾ ಪಾಟೀಲ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಬಸವರಾಜ ಮ್ಯಾಗೋಟಿ, ಸಂಜಯ ಚಾಟೆ, ಸಮೀರ್ ಮುಲ್ಲಾ ವಿನೋದ್ ಚೌಹಾನ್, ಶಂಕರ ಚೌಗುಲೆ, ವಿಠ್ಠಲ ಮಲ್ಲಾರಿ, ಬಾಳೇಶ್, ಪ್ರಕಾಶ, ಗುಡದಪ್ಪ, ಬಸವರಾಜ, ರಮೇಶ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular

error: Content is protected !!