Sunday, January 12, 2025
Google search engine
HomeಅಂಕಣKumbha Mela 2025: ನಾಗಾ ಸಾಧುಗಳ ಮಹಾ ಸಮಾಗಮ! ಇಲ್ಲಿದೆ ನೋಡಿ ಕುಂಭಮೇಳದ ಎಕ್ಸ್‌‌ಕ್ಲೂಸಿವ್‌ ಫೋಟೋಸ್‌!
- Advertisment -spot_img

Kumbha Mela 2025: ನಾಗಾ ಸಾಧುಗಳ ಮಹಾ ಸಮಾಗಮ! ಇಲ್ಲಿದೆ ನೋಡಿ ಕುಂಭಮೇಳದ ಎಕ್ಸ್‌‌ಕ್ಲೂಸಿವ್‌ ಫೋಟೋಸ್‌!

ಪ್ರಯಾಗ್‌ರಾಜ್‌ನಿಂದಲೇ ನಿಮ್ಮ ಮುಂದೆ ತರುತ್ತಿದೆ. ಕುಂಭ ಮೇಳದ ಆರಂಭಕ್ಕೂ ಮುನ್ನದ ಕೆಲವೊಂದು ಎಕ್ಸ್‌ಕ್ಲೂಸಿವ್ ಚಿತ್ರಗಳು ಇಲ್ಲಿದೆ ನೋಡಿ.

ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ ಎನಿಸಿಕೊಂಡಿರುವ ಕುಂಭ ಮೇಳ (Kumbh Mela) ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಈ ಕುಂಭ ಮೇಳದಲ್ಲಿ ಲಕ್ಷಾಂತರ ಮಂದಿ ಭಕ್ತರು, ಸಾಧುಗಳು (Saints), ಸಂತರು, ನಾಗಾಸಾಧುಗಳು (Naga Sadhus), ಅಘೋರಿಗಳು ಸೇರಿದಂತೆ ಲಕ್ಷಾಂತರ ಮಂದಿ ಭಾಗಿಯಾಗ್ತಾರೆ.


ಈ ಬಾರಿ ಉತ್ತರ ಪ್ರದೇಶದ (Uttar Pradesh) ಪ್ರಯಾಗರಾಜ್‌ನಲ್ಲಿ (Prayagraj) ಮಹಾ ಕುಂಭಮೇಳ ನಡೆಯುತ್ತಿದೆ. ಒಂದು ತಿಂಗಳಿನಿಂದ ಹಿಂದೆಯೇ ಇಲ್ಲಿ ಕುಂಭ ಮೇಳೆ ಸಂಭ್ರಮ ಮನೆ ಮಾಡಿದೆ. ಜನವರಿ 13 ರಿಂದ ಫ್ರೆಬವರಿ 26ರವರೆಗೂ ಮಹಾ ಕುಂಭಮೇಳ ನಡೆಯಲಿದೆ.

ಪ್ರಯಾಗ್ ರಾಜ್ ಮಹಾಕುಂಭ ಮೇಳವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಉತ್ಸವವಾಗಲಿದೆ. ಮಹಾಕುಂಭ ಮೇಳ ಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ. ಮಹಾಕುಂಭ ಮೇಳದ ಸಮಯದಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ.

12 ಕುಂಭಮೇಳಗಳ ನಂತರ ಬರುವ ಮಹಾಕುಂಭ ಮೇಳ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರೇ (PM Narendra Modi) ಇದನ್ನು ಏಕತೆಯ ಮಹಾ ಯಜ್ಞ ಎಂದು ಘೋಷಿಸಿದ್ದಾರೆ. ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಪ್ರಯಾಗ್‌ರಾಜ್ (allahabad) ನಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ 40-45 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.


ಮಹಾಕುಂಭ ಮೇಳ ಕೇವಲ ಉತ್ಸವ ಮಾತ್ರವಲ್ಲ ಸಾವಿರಾರು ವರ್ಷಗಳ ಐತಿಹ್ಯ, ಪುರಾತನ ಇತಿಹಾಸ ಹೊಂದಿರುವ ಉತ್ಸಾಹಭರಿತ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಸಾಧುಗಳು, ನಾಗಾ ಸಾಧುಗಳು, ಅಘೋರಿಗಳು ಇಲ್ಲಿಗೆ ಆಗಮಿಸಿದ್ದಾರೆ.

ಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ ಎಂಬ ನಾಲ್ಕು ಸ್ಥಳಗಳಲ್ಲಿ ಸರದಿಯಂತೆ ಕುಂಭಮೇಳವನ್ನು ಆಚರಿಸಲಾಗುತ್ತದೆ. ಅರ್ಧ ಕುಂಭವನ್ನು ಹರಿದ್ವಾರ ಮತ್ತು ಪ್ರಯಾಗ್‌ರಾಜ್‌ನಲ್ಲಿ ಆರು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ.

ಮಹಾಕುಂಭ ಮೇಳದ ಇತಿಹಾಸವು ಸಮುದ್ರ ಮಂಥನ ಹಿಂದೂ ಪುರಾಣವನ್ನು ಉಲ್ಲೇಖಿಸುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ಭಗವಾನ್ ವಿಷ್ಣು ಮೋಹಿನಿಯ ವೇಷದಲ್ಲಿ ಅಮೃತದ ಪಾತ್ರೆಯನ್ನು ಹೊತ್ತೊಯ್ದಾಗ, ದೇವತೆಗಳು ಮತ್ತು ದಾನವರ (ರಾಕ್ಷಸರ) ನಡುವಿನ ಹೋರಾಟದಲ್ಲಿ ಅಮೃತದ ನಾಲ್ಕು ಹನಿಯು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಬಿದ್ದಿತು ಹೀಗೆ ಈ ನಾಲ್ಕು ಸ್ಥಳಗಳು ಪವಿತ್ರ ತೀರ್ಥಸ್ಥಳ ಗಳಾಯಿತು.

ಮೊದಲ ಕುಂಭಮೇಳವನ್ನು ಭಾರತೀಯ ಅಧಿಕಾರಿಗಳು ಜನವರಿ 1954 ರಲ್ಲಿ ಆಯೋಜಿಸಿದ್ದರು. 1966 ರಲ್ಲಿ, ಐದನೇ ಪ್ರಮುಖ ಸ್ನಾನ ದಿನವಾದ ಮಾಘ ಪೂರ್ಣಿಮೆಯಂದು 7 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರು ಎಂದು ದಿ ಹಿಂದು ಪತ್ರಿಕೆ ವರದಿ ಮಾಡಿದೆ.


ಕುಂಭಮೇಳದ ಸ್ಥಳವನ್ನು ನಿರ್ಧರಿಸಲು ಗ್ರಹಗಳ ಒಗ್ಗೂಡುವಿಕೆಯನ್ನು ನೋಡಲಾಗುತ್ತದೆ. ಜ್ಯೋತಿಷ್ಯದ ಸಹಾಯವನ್ನಾಧರಿಸಿ ಸ್ಥಳವನ್ನು ನಿಗದಿಪಡಿಸಲಾಗುತ್ತದೆ. ಗುರು, ಸೂರ್ಯ ಮತ್ತು ಚಂದ್ರರ ಸ್ಥಾನವನ್ನು ಗಣನೆಗೆ ತೆಗೆದುಕೊಂಡು ಅದು ಇರುವ ರಾಶಿಚಕ್ರ ಚಿಹ್ನೆಯನ್ನು ಸಹ ಪರಿಶೀಲಿಸಲಾಗುತ್ತದೆ.

ಕುಂಭಮೇಳ ಕೇವಲ ಧಾರ್ಮಿಕ ನಂಬಿಕೆಯಿಂದಾಗಿ ಮಾತ್ರವಲ್ಲ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ಪರಂಪರಾತ್ಮಕ, ಐತಿಹಾಸಿಕ ಮಹತ್ವವನ್ನು ಸಾರುವ ವಿಶ್ವದ ಅತಿದೊಡ್ಡ ಸಮ್ಮೇಳನವಾಗಿದೆ

RELATED ARTICLES
- Advertisment -spot_img

Most Popular

error: Content is protected !!