ಪಾಲಿಕೆಯ ನಗರ ಸೇವಕರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ .
ಬೆಳಗಾವಿ ವಿಭಾಗೀಯ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಪತ್ರ..
ವಿಚಾರಣೆಗೆ ಹಾಜರಾಗದಿದ್ದಲ್ಲಿ ಏಕಪಕ್ಷೀಯವಾಗಿ ನಿರ್ಣಯ..
ಬೆಳಗಾವಿ : ನಗರದ ದಕ್ಷಿಣ ಮತಕ್ಷೇತ್ರದಲ್ಲಿ ಇರುವ ಆಹಾರ ಮಳಿಗೆಯಾದ ತಿನಿಸು ಕಟ್ಟೆಯಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆಯ, ಬಿಜೆಪಿ ಪಕ್ಷದ, ನಗರ ಸೇವಕರಿಗೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಿಂದ ಕೆಎಂಸಿ ಕಾಯ್ದೆ 1976 ಅಧಿನಿಯಮದಂತೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಲಾಗಿದೆ..
ಸುಜೀತ್ ಮುಳಗುಂದ ಎಂಬ ಸಾಮಾಜಿಕ ಕಾರ್ಯಕರ್ತ, ತಿನಿಸು ಕಟ್ಟೆಯಲ್ಲಿ ಅವ್ಯವಹಾರದ ನಡೆದಿದೆ ಎಂಬ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಈ ಹಿಂದೆ ಕಾರಣ ಕೇಳಿ ನೋಟಿಸ್ ನೀಡಿದ್ದು, ಸದರಿ ಪ್ರಕರಣದ ವಿಚಾರಣೆಯನ್ನು 22/07/2024 ರಂದು ನಿಗದಿ ಮಾಡಿದ್ದು, ಆರೋಪ ಹೊತ್ತ ನಗರ ಸೇವಕರಾದ ಜಯಂತ ಜಾಧವ, ವಾರ್ಡ ಸಂಖ್ಯೆ 23, ಮಂಗೇಶ ಪವಾರ, ವಾರ್ಡ ಸಂಖ್ಯೆ 41, ಇವರು ವಿಚಾರಣೆಗೆ ಹಾಜರಾಗಬೇಕು, ಒಂದು ವೇಳೆ ಹಾಜರಾಗದೇ ಹೋದಲ್ಲಿ ಏಕಪಕ್ಷೀಯವಾಗಿ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳುವಳಿಕೆ ಪತ್ರದಲ್ಲಿ ಸೂಚಿಸಲಾಗಿದೆ..
ವರದಿ ಪ್ರಕಾಶ ಬಸಪ್ಪ ಕುರಗುಂದ..