ಬೆಳಗಾವಿಯ ಎನ್ ಎಸ್ ಪೈ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ..
ವಿದ್ಯಾರ್ಥಿಗಳಿಗೆ ಡೆಂಗ್ಯೂ ಮುಂಜಾಗ್ರತಾ ಕಾರ್ಯಕ್ರಮದ ಅರಿವು..
ಬೆಳಗಾವಿ : ಶನಿವಾರ,6 ಜೂನ್ ರಂದು ಭಾರತೀಯ ಜನತಾ ಪಕ್ಷದ ಮಹಾನಗರ ಮಹಿಳಾ ಮೋರ್ಚಾ ಘಟಕ ಬೆಳಗಾವಿ ವತಿಯಿಂದ, ವನಮಹೋತ್ಸವ ಹಾಗೂ ಡೆಂಗ್ಯೂ ಲಸಿಕಾ ಹಾಕುವ ಜಾಗೃತ ಕಾರ್ಯಕ್ರಮವನ್ನು ಬೆಳಗಾವಿ ಶಿಕ್ಷಣ ಸಂಸ್ಥೆಯ,ಎನ್ ಎಸ್ ಪೈ ಶಾಲೆಯಲ್ಲಿ ಆಯೋಜಿಸಲಾಯಿತು.
ಮಹಿಳಾ ಮೋರ್ಚಾಮುಖ್ಯ ಕಾರ್ಯದರ್ಶಿ ಆಗಿರುವ ಶಿಲ್ಪಾ ಘಟಕರಿ, ಉಪಾಧ್ಯಕ್ಷೆ , ಕಾರ್ಯದರ್ಶಿ ಕವಿತಾ ಹಿರೇಮಠ್ ಪಕ್ಷದ ಮಹಿಳಾ ಪದಾಧಿಕಾರಿಗಳು ಹಾಗೂ ನಗರಸೇವಕರಾದ ಜಯತೀರ್ಥ ಸವದತ್ತಿಯವರು ಉಪಸ್ಥಿತರಿದ್ದರು.
ಮಕ್ಕಳು ಸ್ವಚ್ಚತೆ, ಶಿಸ್ತು ಸುರಕ್ಷಿತ ಆರೋಗ್ಯ ಕಡೆ ಗಮನ ಕೊಡಬೇಕು, ಡೆಂಗ್ಯೂ ಬಗ್ಗೆ ಜಾಗೃತಿಯ ಅಂಶಗಳನ್ನು ಸಾಮಾನ್ಯ ಕಾರ್ಯದರ್ಶಿಯಾದ ಶೀಲಾ ಘಟಕರಿ ಅವರು ಹೇಳಿದರು.
ಪ್ರತಿಯೊಬ್ಬರೂ ತಮ್ಮ ತಾಯಿ ಹೆಸರಿನಲ್ಲಿ ಒಂದು ಮರ ನೆಡುವ ದ್ಯೆಯ ಇಟ್ಟುಕೊಂಡು ಮರ ಬೆಳಿಸಬೇಕು ಎನ್ನುವ ಘೋಷ ವಾಕ್ಯ ಹೇಳಿ ವನಮಹೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಚಾಲನೆ ನೀಡಿದರು.
ದೇಶಭಕ್ತ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಜನ್ಮ ದಿನಾಚರಣೆ ಆಚರಿಸಿ ಅವರ ಆದರ್ಶತೆಯನ್ನು ಅನುಸರಿಸಲು ಮಕ್ಕಳಿಗೆ ಹೇಳಲಾಯಿತು.
ಎಲ್ಲಾ ಮಹಿಳಾ ಸದಸ್ಯರು ಬಹಳ ಹುಮ್ಮನಸಿನಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೋಳಸಿದರು. ಈ ಸಂದರ್ಭದಲ್ಲಿ ಶಾಲೆ ಮುಖ್ಯೋಪಾಧ್ಯಾಯಿನಿ ರಾಧಿಕಾ ನಾಯಿಕ ಸ್ವಾಗತಿಸಿದರು, ಶಿಕ್ಷಕರಾದ ಶ್ರೀಕಾಂತ ಮಲಶೆಟ್ಟಿ ನಿರೂಪಿಸಿದರು, ಸುಮನ್ ಜೋಶಿ ವಂದಿಸಿದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..