- ಬೆಳಗಾವಿಯಲ್ಲಿ ಮೂರು ದಿನಗಳ ಕಾಲ ಮೇವು ಮೇಳ..
- ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವು ಮಾರಾಟದ ವ್ಯವಸ್ಥೆ..
- ಗ್ರಾಹಕರಿಗೂ ರೈತರಿಗೂ ಅನುಕೂಲಕರ ವ್ಯವಸ್ಥೆ ಮಾಡಿದ ತೋಟಗಾರಿಕೆ ಇಲಾಖೆ..
ಬೆಳಗಾವಿ : ನಗರದ ಕ್ಲಬ್ ರಸ್ತೆಯಲ್ಲಿ ಇರುವ ಹ್ಯುಮ ಪಾರ್ಕಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಇದೇ ಶುಕ್ರವಾರ, ಶನಿವಾರ ಹಾಗೂ ರವಿವಾರ ಮೂರು ದಿನಗಳ ಕಾಲ ಮಾವುಮೇಳ ಹಾಗೂ ವನ ದ್ರಾಕ್ಷಿ ಮೇಳವನ್ನು ಆಯೋಜನೆ ಮಾಡಿದ್ದು, ಬೆಳಗಾವಿಯ ಗ್ರಾಹಕರು ಇದರ ಸದುಪಯೋಗ ಪಡೆಯಬೇಕು ಎಂದು ಮೇಳವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹನಾಧಿಕಾರಿಗಳಾದರಾಹುಲ ಶಿಂಧೆ ಅವರು ಹೇಳಿದ್ದಾರೆ..
ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಪ್ರತಿ ವರ್ಷವೂ ಮಾವು ಮೇಳವನ್ನು ನಡೆಸುತ್ತೇವೆ, ಆದರೆ ಈ ಬಾರಿ ವಿಶೇಷವಾಗಿ ಆಯೋಜನೆ ಮಾಡಿದ್ದೇವೆ, ಬೆಳಗಾವಿ ಬ್ರಾಂಡ್ ಎಂಬ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವಂತಹ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ರೈತರ ಹಾಗೂ ಗ್ರಾಹಕರ ಮಧ್ಯೆ ವ್ಯಾಪಾರ ವಹಿವಾಟು ನಡೆಯಲಿದೆ.
ಇದು ರೈತರಿಗೆ ಹಾಗೂ ಬೆಳಗಾವಿಯ ಗ್ರಾಹಕರಿಗೆ ಅನುಕೂಲವಾಗಲಿದೆ ಹಾಗಾಗಿ ಎಲ್ಲ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ರಾಜ್ಯದಲ್ಲಿ ಬೆಳಗಾವಿ ಮ್ಯಾಂಗೋ ಪ್ರಸಿದ್ಧವಾಗಬೇಕೆಂಬ ಆಸೆಯಿದೆ ಆ ನಿಟ್ಟಿನಲ್ಲಿ ಎಲ್ಲರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದ ಅವರು ಈ ಬಾರಿ ರೈತರು ಕಷ್ಟದಲ್ಲಿದ್ದಾರೆ ಹಾಗಾಗಿ ತೋಟಗಾರಿಕೆ ಇಲಾಖೆಯ ಮೂಲಕ ತಾವು ಬೆಳೆದ ಮಾವುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವಂತಹ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಸಿಲಿನ ತಾಪ ಹೆಚ್ಚಿದೆ ಹಾಗಾಗಿ ನಿಮ್ಮ ರಕ್ಷಣೆಯ ಜೊತೆಗೆ ಮಾವು ಮೇಳದಲ್ಲಿ ಭಾಗಿಯಾಗಿ ಆನಂದಿಸಿ ಎಂದು ಮನವಿ ಮಾಡಿದರು..
ವರದಿ ಪ್ರಕಾಶ್ ಕುರಗುಂದ..