ಬೆಳಗಾವಿ: ಕೃಷಿಕರೊಬ್ಬರ ಹೊಲದಲ್ಲಿರುವ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಾಳ ಗ್ರಾಮದಲ್ಲಿ ನಡೆದಿದೆ.
ಕೃಷಿ ಹೊಂಡದ ನೀರು ತರಲು ಯುವಕರಿಬ್ಬರು ಹೋಗಿದ್ದಾಗ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಕನ್ನಾಳ ಗ್ರಾಮದ ಸಿದ್ದಲಿಂಗ ಸಿದ್ದರಾಮ ಹಿರೇ ಕುರುಬರ(19) ಮತ್ತು ಮುಧೋಳ ತಾಲೂಕಿನ ವೆಂಕಟಾಪುರ ಗ್ರಾಮದ ಆಕಾಶ ನಿಂಗಪ್ಪ ತುಂಗಳ(6) ಮೃತಪಟ್ಟವರು. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.