Tuesday, December 24, 2024
Google search engine
Homeಸುದ್ದಿನೂರಾರು ಯುವಕರು ಕಾಂಗ್ರೆಸ್ ಪಕ್ಷದತ್ತ ಹೆಜ್ಜೆ ಇಟ್ಟಿರುವುದು ಸಂತಸ ತಂದಿದೆ: ಸಚಿವ ಸತೀಶ್‌ ಜಾರಕಿಹೊಳಿ

ನೂರಾರು ಯುವಕರು ಕಾಂಗ್ರೆಸ್ ಪಕ್ಷದತ್ತ ಹೆಜ್ಜೆ ಇಟ್ಟಿರುವುದು ಸಂತಸ ತಂದಿದೆ: ಸಚಿವ ಸತೀಶ್‌ ಜಾರಕಿಹೊಳಿ

ಯಮಕನಮರಡಿ: ಯುವಕರು, ಮಧ್ಯಮವರ್ಗ ಹಾಗೂ ರೈತರ ಏಳಿಗೆಗಾಗಿ ಕಾಂಗ್ರೆಸ್ ಪಕ್ಷ ಶ್ರಮಿಸುತ್ತಿದ್ದು, ಅಭಿವೃದ್ಧಿ ಇಲ್ಲದೇ ಕೇವಲ ಸುಳ್ಳು ಪ್ರಚಾರಕ್ಕೆ ಸೀಮಿತವಾದ ಬಿಜೆಪಿ ಪಕ್ಷಕ್ಕೆ ಬೇಸತ್ತು ನೂರಾರು ಯುವಕರು ಕಾಂಗ್ರೆಸ್ ಪಕ್ಷದತ್ತ ಹೆಜ್ಜೆ ಇಟ್ಟಿರುವುದು ಸಂತಸ ತಂದಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಬಸ್ಸಾಪೂರ, ಹಗೆದಾಳ, ಶಿರೂರ ಹಾಗೂ ಪಾಶ್ಚಾಪೂರ ಗ್ರಾಮದ ನೂರಾರು ಯುವಕರನ್ನು ಸಂಜಯ ಸಿದ್ಧಗೌಡರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.

ಬಿಜೆಪಿಯವರು ಲಜ್ಜೆಗೆಟ್ಟು ಸುಳ್ಳು ಹೇಳುತ್ತಾರೆ. ನಾವು ಸತ್ಯ ಹೇಳುವುದಕ್ಕೆ ಹಿಂಜರಿಯುತ್ತಿದ್ದೇವೆ. ಬಿಜೆಪಿ ಹೇಳುವ ಸುಳ್ಳುಗಳಿಗೆ ಕಾಂಗ್ರೆಸ್‌ ಕಾರ‍್ಯಕರ್ತರು ಜನರಿಗೆ ಸತ್ಯ ಹೇಳಿ ವಿಶ್ವಾಸ ಗಳಿಸಬೇಕು. ಬಡಜನರ ಸಮಸ್ಯೆಗಳಿಗೆ ಸ್ಪಂದಿಸದ ಬಿಜೆಪಿ ಲಜ್ಜೆಗೆಟ್ಟು ಸುಳ್ಳು ಹೇಳಿ ಅವರನ್ನು ಓಲೈಸಿಕೊಳ್ಳುತ್ತದೆ. ನಾವು ಬಡವರ ಕೆಲಸ ಮಾಡಿದರೂ ಸತ್ಯ ಹೇಳಲು ಹಿಂಜರಿಯುತ್ತೇವೆ. ಇದೇ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಇರುವ ವ್ಯತ್ಯಾಸ. ಕಾರ‍್ಯಕರ್ತರು ಮನೆಯಿಂದ ಹೊರಬಂದು ನಾವು ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಜನರಿಗೆ ಸತ್ಯ ಹೇಳಿ ಅವರ ಮನ ಗೆಲ್ಲಬೇಕು. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದರು.

ಬಿಜೆಪಿಯಿಂದ ಬಡವರು, ಶೋಷಿತರು, ರೈತರು, ಮಹಿಳೆಯರು, ನೊಂದವರಿಗೆ ಯಾವುದೇ ಪ್ರಯೋಜನವಿಲ್ಲ. ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಬಡವರಿಗೆಲ್ಲ ಬಾಗಿಲುಗಳೂ ಮುಚ್ಚಿಕೊಂಡಿವೆ. ಬಿಜೆಪಿ ಏನಿದ್ದರೂ ಶ್ರೀಮಂತರು, ಬಂಡವಾಳಶಾಹಿಗಳು, ಮೇಲ್ವರ್ಗದ ಪರ. ಅದು ಬಂಡವಾಳಶಾಹಿಗಳ ಪಕ್ಷ ಎಂದು ಟೀಕಿಸಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಬೆಂಬಲಿಸುವ ಮೂಲಕ ಚಿಕ್ಕೋಡಿ ಲೋಕಸಭೆ ಕ್ಷೇತ್ರವನ್ನು ಕಾಂಗ್ರೆಸ್‌ ಪಕ್ಷದ ತೆಕ್ಕೆಗೆ ಪಡೆಯೋಣ ಎಂದು ಇದೇ ವೇಳೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರಿಗೆ ತಿಳಿಸಿದರು.

ಇದೇ ವೇಳೆ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಬಸ್ಸಾಪೂರ, ಹಗೆದಾಳ, ಶಿರೂರ ಹಾಗೂ ಪಾಶ್ಚಾಪೂರ ಗ್ರಾಮದ ಕಾಂಗ್ರೆಸ್‌ ಸೇರ್ಪಡೆಯಾದ ನೂರಾರು ಯುವಕರನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಶಾಲು ಹೊದಿಸಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಜುಗೌಡ್‌ ಪಾಟೀಲ್‌, ಶಂಕರ ಗುಡಸ, ಸಂಜಯ ಸಿದ್ದಗೌಡರ್, ಸಂತೋಷ ಗುಡಸ್‌, ಬಿ.ಆರ್.‌ ಬಂಗೆರಾಮ್‌, ಮಲಿಕ್‌, ಕಿಲ್ಲೇದಾರ್‌, ಲಕ್ಷ್ಮಣ ವಂಟಮೂರಿ, ಭೀಮಶಿ ಕಳ್ಳಿಮನಿ, ಮಹಾಂತೇಶ್‌ ಮಗದುಮ್‌, ಕರೆಪ್ಪ ಗುಡೆನ್ನವರ್‌, ಮಂಜುಗೌಡ ಪಾಟೀಲ್‌, ನಿಂಗಪ್ಪಾ ಬಾಜಿರಾಮ್‌, ಈರಪ್ಪ ಬಾಜಿರಾಮ್‌, ಭೀಮರಾಯ್‌ ಲಕ್ಕಣ್ಣವರ್‌ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

RELATED ARTICLES
- Advertisment -spot_img

Most Popular

error: Content is protected !!