ರಾಯಬಾಗ: ಸಾಲದ ಬಾಧೆ ತಾಳಲಾರದೆ ಮಾನಸಿಕವಾಗಿ ನೊಂದ ರೈತನೊಬ್ಬ ನೇಣು ಹಾಕಿಕೊಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಸಾಯಂಕಾಲ ತಾಲೂಕಿನ ಹೊಸದಿಗ್ಗೆವಾಡಿ ಗ್ರಾಮದಲ್ಲಿ ನಡೆದಿದೆ.
ಮಲ್ಲಪ್ಪ ಬಾಳಪ್ಪ ದೊಣವಾಡೆ (60) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ರೈತ ಮಲ್ಲಪ್ಪ ಇತನು ಜಮೀನಿನ ಸಾಗುವಳಿ ಮತ್ತು ಅಭಿವೃದ್ಧಿಗಾಗಿ ಗ್ರಾಮದ ವಿವಿಧ ಸಹಕಾರಿ ಸಂಘಗಳಲ್ಲಿ ಸುಮಾರು ರೂ. 4.80 ಲಕ್ಷ ಸಾಲ ಮಾಡಿದ್ದನ್ನು, ಈ ವರ್ಷ ಸರಿಯಾದ ಮಳೆ ಆಗದೆ ಇರುವುದರಿಂದ ಬೆಳೆಗಳು ಬಾರದೇ ಇರುವುದರಿಂದ ಸಾಲ ತಿರಿಸಲಾಗದೇ ಮಾನಸಿಕವಾಗಿ ನೊಂದು ಶುಕ್ರವಾರ ತನ್ನ ಮನೆ ಹತ್ತಿರ ಇರುವ ದನಗಳ ಪತ್ರಾಸ ಶೆಡ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೈತನ ಪತ್ನಿ ಹೀರಾಬಾಯಿ ದೊಣವಾಡೆ ರಾಯಬಾಗ ಪೊಲೀಸ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ.