ಬೆಳಗಾವಿ: ಕಳಸಾ ಬಂಡೂರಿ ನಾಲಾ ಕಾಮಗಾರಿ ಆರಂಭಕ್ಕೆ ಗಡುವು ಬರುವ 21ರಂದು ನರಗುಂದದಲ್ಲಿ ರೈತ ಹುತಾತ್ಮ ದಿನಾಚರಣೆ ಮಾಡಲಾಗುತ್ತೆ. ರೈತ ಹುತಾತ್ಮ ದಿನಾಚರಣೆ ಒಳಗಾಗಿ ಮಹಾದಾಯಿ, ಕಳಸ ಬಂಡೂರಿ ನಾಲಾ ಕಾಮಗಾರಿ ಪ್ರಾರಂಭ ಮಾಡಬೇಕು ಇಲ್ಲವಾದರೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಎಚ್ಚರರಿಸಿದರು.
ನಗರದಲ್ಲಿ ಮಧ್ಯಮಜೊತೆ ಮಾತನಾಡಿದ ಅವರು ಕಳಸಾ ಬಂಡೂರಿ ಯೋಜನೆಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಉತ್ತರ ಕರ್ನಾಟಕದ ರೈತರ ಹಿತಾಸಕ್ತಿಗಳನ್ನು ಉದ್ದೇಶಪೂರ್ವಕವಾಗಿ ಬಲಿಕೊಡಲಾಗುತ್ತಿದೆ ಎಂದರು.
ನದಿ ನೀರು ಹಂಚಿಕೆ ಹಾಗೂ ಕಾಮಗಾರಿ ವಿಚಾರದಲ್ಲಿ ನ್ಯಾಯಾಧೀಕರಣ ತೀರ್ಪು ಉಲ್ಲಂಘನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಲ್ಲಂಘನೆ ಮಾಡ್ತಿವೆ ಇನ್ನಾದರೂ ಆದಷ್ಟು ಬೇಗ ಕಾಮಗಾರಿ ಆರಂಭ ಮಾಡಬೇಕೆಂದು ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಒತ್ತಾಯಿಸಿದರು