
algolist: 0;
multi-frame: 0;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 42;
ಬೆಳಗಾವಿ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನ ವಿರೋಧಿಸಿ ಸೆರಿದಂತೆ ವಿವಿಧ ಬೇಡಿಕೆ ಇಡೆರಿಸುವಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಡಿಸಿ ಕಚೇರಿವರೆಗೆ ತೆರಳಿ ಜಿಲ್ಲಾಧಿಕಾರಿಗಳ ಮುಲಕ ರಾಜ್ಯ ರಾಜ್ಯ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.
ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನಾಕಾರರು ಪ್ರತಿಬಟಿಸಿ ಕಾರ್ಮಿಕ ವಿರೋಧಿ 04ಲೇಬರ್ ಕೋಡ್ ರದ್ದುಗೊಳಿಸುವಂತೆ ಆಗ್ರಹಸಿದರು.
ಸಾರ್ವಜನಿಕ ವಲಯ ಮತ್ತು ಸರ್ಕಾರಿ ಉದ್ಯಮ ಖಾಸಗೀಕರಣ ನೀತಿ ನಿಲ್ಲಿಸಬೇಕು.ಟ್ರೇಡ್ ಯೂನಿಯನ್ ಹುದ್ದೆ ಹಕ್ಕುಗಳ ಖಚಿತಪಡಿಸಬೇಕು. OPS ಜಾರಿಮಾಡಬೇಕು, ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರ ಸೇವೆ ಖಾಯಂ ಮಾಡಬೇಕು.
ವಿದ್ಯುತ್ ಮಸೂದೆ-2023ರದ್ದುಗೊಳಿಸಿ, ಸ್ಮಾರ್ಟ್ ಮೀಟರ್ ಅಳವಡಿಕೆ ಬಂದ್ ಮಾಡಬೇಕು.ಪ್ರತಿದಿನ 08ಗಂಟೆಯ ಕೆಲಸದ ಅವಧಿ ಮೀರದಂತೆ ಖಚಿತಪಡಿಸಬೇಕು.ಅಸಂಘಟಿತ ವಲಯದ ಕಾರ್ಮಿಕರಿಗೆ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕೆಂದು ಒತ್ತಾಯಾಯಿಸಿದರು.
ಅಲ್ಲದೇ ಗುಜರಾತ್ ಹೈಕೋರ್ಟ್ ತೀರ್ಪಿನಂತೆ ರಾಜ್ಯದ ಅಂಗನವಾಡಿ ನೌಕರರ ಖಾಯಂ ಮಾಡಬೇಕು.29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಬೇಕು.ಹೊಸದಾಗಿ ತಂದಿರುವ 04 ಸಂಹಿತೆಗಳನ್ನೂ ರದ್ದು ಮಾಡಬೇಕು 10ಸಾವಿರ ಪಿಂಚಣಿ ಜತೆಗೆ 26ಸಾವಿರ ಕನಿಷ್ಠ ವೇತನ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತರ ಸಂಘ, ಅಂಗನವಾಡಿ ಕಾರ್ಯಕರ್ತರ,ಗ್ರಾಮ ಪಂಚಾಯತ್ ಕಾರ್ಮಿಕರು, ಬ್ಯಾಂಕ್ ಸಂಘಟನೆ, ಕೆಎಸ್ ಆರ್ ಟಿಸಿ ವರ್ಕರ್ಸ್, ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘಟನೆಗಳ ಭಾಗಿಯಾಗಿದರು.