ಬೆಳಗಾವಿ: ಬೆಳಗಾವಿಯಲ್ಲಿ ಕಡವೆ ಬೇಟೆಯಾಡಿದ್ದ 9ಜನ ಆರೋಪಿಗಳ ಬಂಧನ ಮಾಡಿರೊ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನೇರಸೆ ಅರಣ್ಯದ ಲೋಂಡಾ ಅರಣ್ಯ ವಲಯದ ವ್ಯಾಪ್ತಿಯಲ್ಲಿ ನಡೆದಿದೆ.
ಖಾನಾಪುರ ತಾಲೂಕಿನ ನೇರಸೆ ಗ್ರಾಮದ ರಂಜಿತ್ ದೇಸಾಯಿ, ಬಲವಂತ ದೇಸಾಯಿ, ಆತ್ಮರಾಮ್ ದೇವಳಿ,ಪ್ರಮೋದ್ ದೇಸಾಯಿ, ದತ್ತರಾಜ್ ಹವಾಲ್ದಾರ್, ಜ್ಞಾನೇಶ ಗಾವಡೆ,
ಗೋವಿಂದ ದೇಸಾಯಿ, ಅಪ್ಪಿ ಹಣಬರ, ಬರಪ್ಪಹಣಬರ ಬಂಧಿತ ಆರೋಪಿಗಳು ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೇಸ್ ದಾಖಲಾಗಿದೆ.
ಬಂಧಿತರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ, ಆರ್ ಎಫ್ಓ ಶ್ರೀಕಾಂತ್ ಪಾಟೀಲ್, ವಲಯ ಅರಣ್ಯ ಅಧಿಕಾರಿ ಸೈಯದ್ ನದಾಫ್ ನೇತೃತ್ವದಲ್ಲಿ ಕಾರ್ಯಾಚರಣೆ .