ಬೆಳಗಾವಿ: ಡಬಲ್ ಬ್ಯಾರಲ್ ಗನ್, ಕುಡಗೋಲು, ಡೊಣ್ಣೆಯಿಂದ ರಿಯಲ್ ಎಸ್ಟೇಟ್ ಉದ್ಯಮಿ ರಾಜಶೇಖರ ನಾಯಕ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಬುಧವಾರ ಬೆಳಗಾವಿ ತಾಲ್ಲೂಕಿನ ಹೊನಗಾ ಗ್ರಾಮದ ವಿಠ್ಠಲ ಮಂದಿರದಲ್ಲಿ ನಡೆದಿದೆ .
ಎರಡು ಗುಂಪುಗಳ ಮಧ್ಯೆ ನಡೆದ ಭೀಕರ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆ. ಹಣಕಾಸಿನ ವ್ಯವಹಾರ ಸಂಬಂಧ ಎರಡು ಗುಂಪುಗಳ ಮಧ್ಯೆ ಗಲಾಟೆ ವಿಕೋಪಕ್ಕೆ ಕಾಕತಿ ಗ್ರಾಮದ ರಾಜಶೇಖರ ನಾಯಕ ಎಂಬುವವರ ಮೇಲೆ ಹಲ್ಲೆಗೆ ಯತ್ನ ಲಗಮಾ ಬುಡರಿ, ಕಮಲೇಶ ಬುಡರಿ, ರಾಮಪ್ಪ, ಕಮಲೇಶ ಎಂಬುವವರಿಂದ ಹಲ್ಲೆ. ರಾಜಶೇಖರ್ ಕಡೆಯಿಂದ ಸೈಟ್ ಪಡೆದು ಹಣ ಮರಳಿಸಲು ಸತಾಯಿಸುತ್ತಿದ್ದ ಲಗಮಾ ಬುಡರಿ ರಿಯಲ್ ಎಸ್ಟೇಟ್ ಉದ್ಯಮಿ ರಾಜಶೇಖರ ಹಣ ಕೇಳಲು ಹೋದಾಗ ದಾಳಿಗೆ ಯತ್ನಿಸಿದ್ದಾರೆ.
ನಾಲ್ವರ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು