ಬೆಳಗಾವಿ : ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಕುಡಿಯುವ ನೀರು, ನೆರಳು ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಇತರೆ ಎಲ್ಲ ಸೌಕರ್ಯಗಳು ಮಾಡಬೇಕೆಂದು ಯೋಜನಾ ನಿರ್ದೇಶಕರಾದ ರವಿ ಎನ್. ಬಂಗಾರಪ್ಪನ್ನವರ ಸೂಚಿಸಿದರು.
ತಾಲ್ಲೂಕಿನ ಕಂಗ್ರಾಳಿ ಕೆಎಚ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಲತಗಾ ಗ್ರಾಮದಲ್ಲಿ ಹೊಸ ಕೆರೆ ನಿರ್ಮಾಣ ಕಾಮಗಾರಿಗೆ ಏ. 18 ರಂದು ಶುಕ್ರವಾರ ಭೇಟಿ ನೀಡಿ ಮಾತನಾಡಿ, ಅವರು ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಳವಾಗುತಿದ್ದು, ಕೂಲಿಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಕೆಲಸದಲ್ಲಿ ಶೇ% 30ರಷ್ಟು ರಿಯಾಯಿತಿ ನೀಡಲಾಗಿದೆ, ಇದರ ಸದುಪಯೋಗವನ್ನು ನರೇಗಾ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಸಹಾಯಕ ನಿರ್ದೇಶಕ (ಗ್ರಾಉ) ಬಿ.ಡಿ ಕಡೇಮನಿ. ಪಡಿಒ ಗೋಪಾಲ ನಾಯಕ, ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇದ್ದರು.