ಹುಕ್ಕೇರಿ: ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸಿ ಎಂದು ಹುಕ್ಕೇರಿ ಸಂತ ನಿರಂಕಾರಿ ಮಂಡಳಿ ಸಂಯೋಜಕ, ಜ್ಞಾನ ಪ್ರಚಾರಕ ಮುಖಿ ಮಾರುತಿ ಮೋರೆ ಹೇಳಿದರು.
ಇಂದು ಹುಕ್ಕೇರಿ ಸಂತ ನಿರಂಕಾರಿ ಸತ್ಸಂಗ ಭವನದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷ ಏಪ್ರಿಲ್ 24 ರಂದು ಹುಕ್ಕೇರಿ ನಗರದಲ್ಲಿ ಸುನೀಲಕುಮಾರ ನಾತ್ರಾಜಿಯವರ ಆದೇಶದ ಮೇರೆಗೆ ಸಂತ ನಿರಂಕಾರಿ ಮಂಡಳ ವತಿಯಿಂದ ಮಾನವ ಏಕತಾ ದಿವಸ ಅಂಗವಾಗಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಹಮ್ಮಿಕೋಳ್ಳಲಾಗಿದೆ ಕಾರಣ ಈ ವರ್ಷ ಹೇಚ್ಚನ ಸಂಖ್ಯೆಯಲ್ಲಿ ಯವಕ, ಯುವತಿಯರು ಆಗಮಿಸಿ ರಕ್ತ ದಾನ ಮಾಡಿ ನಮ್ಮ ಮತ್ತು ಇತರರ ಜೀವ ಉಳಿಸುವ ಕಾರ್ಯ ಮಾಡಬೇಕು ಎಂದರು.
ಚಂದ್ರಶೇಖರ ಗಂಗಣ್ಣವರ ಮಾತನಾಡಿ ಸಂತ ನಿರಂಕಾರಿ ಮಿಷನ್ ವತಿಯಿಂದ ಏಪ್ರಿಲ್ 24 ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 5 ಗಂಟೆ ವರೆಗೆ ಜರುಗಲಿರುವ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಜೀವದ ಜೋತೆಗೆ ಮತ್ತೊಬ್ಬರ ಜೀವ ಉಳಿಸುವ ಮತ್ವದ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದರು.
ನಂತರ ರಕ್ತ ದಾನ ಶಿಬಿರ ಯಶಸ್ವಿಗಾಗಿ ವಿಷೇಶ ಪ್ರಾರ್ಥನೆ ಜರುಗಿಸಲಾಯಿತು.
ಈ ಸಂದರ್ಭದಲ್ಲಿ ಸಂತ ನಿರಂಕಾರಿ ಸತ್ಸಂಗ ಹುಕ್ಕೇರಿ ಶಾಖೆ ಪ್ರಮುಖರಾದ ಭರಮನ್ನಾ ಜಾಧವ, ಶಿದ್ದೇಶ ಬೆನಾಡಿಕರ, ಅಶೋಕ ಕಲಾಜ, ಬಸವರಾಜ ಸದ್ರೆ, ಸಂದೀಪ ಸೂರ್ಯವಂಶಿ, ರಾಜು ಕೋಷ್ಟಿ, ರವಿ ಕದಮ, ಸುನಿತಾ ಮೋರೆ, ಸುವರ್ಣಾ ಅಂಬಲೆ, ಸುಧಾ ಕಲಾಜ, ಸ್ವಪ್ನಾ ಮತ್ತು ಸವಿತಾ ಬೆನಾಡಿಕರ, ಲಕ್ಷ್ಮಿ ಜಾಧವ ಇತರರು ಉಪಸ್ಥಿತರಿದ್ದರು.