ಬೆಳಗಾವಿ: ಬೆಳಗಾವಿ ಸಿಟಿ ಸರ್ವೇ ಕಚೇರಿಯಲ್ಲಿ “ಬೇಲಿಯೇ ಎದ್ದು ಹೊಲ ಮೆಯುತ್ತಿದೆ” ಕಚೇರಿಯಲ್ಲಿ ಪ್ರತಿಯೊಂದು ಕೆಲಸಕ್ಕೂ ಹಣ ನೀಡುವ ಪರಿಸ್ಥಿತಿ ಎದುರಾಗಿದೆ.
ನಗರದ ಸಾರ್ವಜನಿಕರು ತಮ್ಮ ಆಸ್ತಿಗಳ ಸಿಟಿಎಸ್ ಉತಾರ ಮತ್ತು ಹಕ್ಕು ಬದಲಾವಣೆ, ನಕ್ಷೆ ಹೀಗೇ ಹಲವು ಕಾರ್ಯಗಳಿಗೆ ಸಿಟಿ ಸರ್ವೇ ಕಚೇರಿಗೆ ದಿನ ನಿತ್ಯ ಅಲ್ಲೆದಾಡುತ್ತಾರೆ. ಹೀಗೆ ಬರುವ ಸಾರ್ವಜನಿಕರ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿಕೊಡದೇ ಅವರನ್ನು ಕಚೇರಿಗೆ ಪದೇ ಪದೇ ಬರುವ ಹಾಗೇ ಮಾಡುತ್ತಾರೆ.
ಸಾರ್ವಜನಿಕರು ದಿನನಿತ್ಯದ ಕಾರ್ಯ ಕೆಲಸಗಳನ್ನು ಬಿಟ್ಟು ಸಿಟಿಎಸ್ ಕಚೇರಿ ಮೆಟ್ಟಿಲುಗಳನ್ನೇರಿ ಸುಸ್ತಾಗಿ ಅಧಿಕಾರಿಗಳು ಹೇಳಿದಷ್ಟು ಹಣವನ್ನು ನೀಡಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಿದೆ.
ಆದರೆ ಇಲ್ಲಿಯೂ ಒಂದು ನಿಯಮ ಇದೇ ಬಾಜರದಲ್ಲಿ ಹೇಗೆ ಒಂದು ವಸ್ತುಗಳಿಗೆ ಒಂದು ರೇಟ್ ಇರುತ್ತದೆ ಹಾಗೇ ಉತಾರದಲ್ಲಿ ಹೆಸರು ಸೇರಿಸಬೇಕು ಅಂದರೆ 25-30 ಸಾವಿರ, ಇನ್ನೂ ಖರೀದಿ ಮಾಡಿದ ಸೆಲ್ ಡಿಡ್ ಪ್ರಕಾರ ಹೆಸರು ನೋಂದಾಯಿಸಬೇಕೆಂದರೆ 15-20 ಸಾವಿರ, ಅಪಾರ್ಟ್‌ಮೆಂಟ್ ಪ್ಲಾಟ್ ಗಳನ್ನು ವಿಭಜನೆ ಮಾಡಿ ಖರೀದಿ ಮಾಡಿದ ಮಾಲೀಕರ ಹೆಸರನ್ನು ಸಿಟಿಎಸ್ ಉತಾರ ಮೇಲೆ ಸೇರಿಸಬೇಕೆಂದರೆ 15-20 ಸಾವಿರ ಹೀಗೆ ಈ ಇಲಾಖೆಯ ಕೆಚೇರಿಯಲ್ಲಿ ಪ್ರತಿಯೊಂದಕ್ಕೂ ಒಂದು ರೇಟ್ ಲಿಸ್ಟ್ ಮೂಲಕ ಕೆಲಸ ನಿರ್ವಹಣೆ ಆಗುತ್ತಿದೆ ಎಂದು ಸಾರ್ವಜನಿಕರ ಅಭಿಪ್ರಾಯ ಕೇಳಿ ಬರುತ್ತಿದೆ.
ಅಲ್ಲದೇ ಇಲ್ಲಿ ಇನ್ನೂ ಒಂದು ಸಿಸ್ಟಮ್ ಏನೆಂದರೆ ಮಧ್ಯವರ್ತಿಗಳು (ಏಜೆಂಟ್) ಅಂದರೆ ಲೇಔಟ್, ಅಪಾರ್ಟ್‌ಮೆಂಟ್, ಖಾಲಿ ಜಾಗ ಇತರೆ ಕೆಲಸಗಳನ್ನು ಈ ಕಚೇರಿಗೆ ಎಜೆಂಟಗಳ ಮೂಲಕ ಕಾರ್ಯಗಳು ನಡೆಯುತ್ತಿವೆ ಕಚೇರಿಯ ತುಂಬಾ ಬರಿ ಏಜೆಂಟರ ಹಾವಳಿಯೇ ಹೆಚ್ಚಾಗಿದೆ.
ಏಜೆಂಟರ್ ನಂಟು ಎಲ್ಲ ಕಚೇರಿಯ ಅಧಿಕಾರಿಗಳ ಜೊತೆಗೆ ಹೊಂದಿಕೊಂಡಿದೆ ಏಜೆಂಟರು ನೀಡುವ ಕೆಲಸಗಳು ಕಚೇರಿಯ ಸಮಯ ಮುಗಿದ ನಂತರ ಏಜೆಂಟರನ್ನು ಕಚೇರಿಗೆ ಒಳಗಡೆ ಕೂರಿಸಿಕೊಂಡು ಯಾವ ಟೇಬಲ್ ಸರ್ವೇರನ್ ಕರೆದು ಅವರ ಕೆಲಸವನ್ನು ಮಾಡಿಕೊಡಲು ಸೂಚಿಸಿ, ಏಜೆಂಟರ ಜೊತೆ ಡೈರೆಕ್ಟ ಎಡಿಎಲ್‌ಆರ್ ಅವರೇ ಡೀಲ್ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಕೆಲಸ ಮಾಡಿಸಿಕೊಳ್ಳಲು ಬಂದ ವ್ಯಕ್ತಿಗಳು ಯಾಕೆ ಸರ್ ಇಷ್ಟು ಹಣ ಬೇಡಿಕೆ ಇಡುತ್ತಿದ್ದಾರೆ ಎಂದು ಕಚೇರಿಯ ಸಿಬ್ಬಂದಿಗಳನ್ನು ಕೇಳಿದರೆ ನಾವು ಮೇಲಿನ ಅಧಿಕಾರಿಗಳಿಗೆ ಕೊಡಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ.
ಭೂಮಾಪನ ಇಲಾಖೆ ಎಡಿಎಲ್‌ಆರ್ ದೂರ ಡಿಡಿಎಲ್ಆರ್ ಮತ್ತು ಜೆಡಿಎಲ್‌ಆರ್ ಅವರಿಗೆ ಸಲ್ಲಿಸಿದರೆ ಅಲ್ಲಿಯೂ ಅದೇ ರಾಗ ಅದೇ ಹಾಡು ಆಗಿದೆ.
ಪಕ್ಕದಲ್ಲಿಯೇ ಲೋಕಾಯುಕ್ತ ಕಚೇರಿ ಇದ್ದರು ಯಾವುದೇ ಉಪಯೋಗ ಆಗುತ್ತಿಲ್ಲ, ಈ ಕುರಿತು ಮೇಲಾಧಿಕಾರಿಗಳು ಯಾವ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತಾರೆ ನೋಡೋಣ…?