Tuesday, April 29, 2025
Google search engine
Homeಜಿಲ್ಲಾಬೆಳಗಾವಿ ನಗರದ ಸುತ್ತಮುತ್ತಲು ನಡೆಯುತ್ತಿರುವ ಹಿಂದು ವಿರೋಧಿ ಘಟನೆಗಳನ್ನು ಖಂಡಿಸಿ ಪ್ರತಿಭಟನೆ
spot_img

ಬೆಳಗಾವಿ ನಗರದ ಸುತ್ತಮುತ್ತಲು ನಡೆಯುತ್ತಿರುವ ಹಿಂದು ವಿರೋಧಿ ಘಟನೆಗಳನ್ನು ಖಂಡಿಸಿ ಪ್ರತಿಭಟನೆ

ಬೆಳಗಾವಿ:  ಬೆಳಗಾವಿ ನಗರದ ಸುತ್ತಮುತ್ತಲು ನಡೆಯುತ್ತಿರುವ  ಹಿಂದು ವಿರೋಧಿ ಘಟನೆಗಳನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ನೇತೃತ್ವದಲ್ಲಿ ಶುಕ್ರವಾರ ಬೆಳಗಾವಿ  ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

ನಗರದ  ಕಮಿಷನರ್ ಕಚೇರಿ ಮುಂಭಾಗದಲ್ಲಿ ಬಜರಂಗದ ನೇತೃತ್ವದಲ್ಲಿ ಪ್ರತಿಭಟನಾಕಾರರು ಪ್ರತಿಭಟಿಸಿ ಪಾಂಗುಳಗಲ್ಲಿ ಅಶ್ವತ್ಥಾಮ ದೇವಸ್ಥಾನಕ್ಕೆ ಮುಸ್ಲಿಂ ಯುವಕನಿಂದ ಕಲ್ಲೇಸಯಲಾಗಿದೆ. ಕಲ್ಲು ಎಸೆದ ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು .

ದರ್ಬಾರ್ ಗಲ್ಲಿ ಸಾರ್ವಜನಿಕ ಸ್ಕ್ರೀನ್ ಮೂಲಕ ಔರಂಗಜೇಬ್ ,ಟಿಪ್ಪು ಸುಲ್ತಾನ್ ಸಾಹಸ ಪ್ರದರ್ಶನ ಮಾಡಿ, ಸಂಭಾಜೀ ಮಹಾರಾಜರಿಗೆ ಅಪಮಾನ ಮಾಡಿ ಶಾಂತಿ‌ ಕದಡುವ ಕೆಲಸ ಮಾಡ್ತಿದ್ದಾರೆ ಇದನ್ನು ನಿಲ್ಲಿಸಿ, ಕೇದನೂರ ಪಂಚಾಯತ್ ವ್ಯಾಪ್ತಿಯ ಮಹಾದೇವ ಮಂದಿರದ ಬಳಿ ನಮಾಜ್ ಮಾಡಿ, ಮಾಂಸಾಹಾರ ಸೇವನೆ ಮಾಡುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಕರದುಕೊಂಡು ಮೋಜು‌ಮಸ್ತಿ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಬೆಳಗಾವಿ ಜಿಲ್ಲೆಯಲ್ಲಿ ಗಾಂಜಾ ನಶೆಯಲ್ಲಿ ಅನೇಕ ದುರ್ಘಟನೆಗಳು ನಡೆಯುತ್ತಿವೆ. ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

RELATED ARTICLES
- Advertisment -spot_img

Most Popular

error: Content is protected !!