ಬೆಳಗಾವಿ: ಪ್ರತಿ ವರ್ಷವೂ ಜ. 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಮಹತ್ವಪೂರ್ಣವಾಗಿ ಆಚರಿಸಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಭದ್ರತೆ ಯೊಂದಿಗೆ ಅವರಿಗೆ ಅಭಿವೃದ್ಧಿಗೆ
ರೈಲ್ವೆ ರಕ್ಷಣಾ ದಳದ ಪಾತ್ರ ಮಹತ್ವಸುತ್ತಿದ್ದು, ಅವರಿಗೆ ರಕ್ಷಾ ಕವಚವಾಗಿ ಹಗಲಿರುಳು ಶ್ರಮಿಸುತ್ತಿದೆ.
ಹೌದು… ಹೆಣ್ಣು ಮಕ್ಕಳು ದೇಶದ ಆಸ್ತಿ, ಬಾಲಕಿಯರ ಹಕ್ಕು, ಶಿಕ್ಷಣ ಮತ್ತು ಕಲ್ಯಾಣವನ್ನು ಗೌರವಿಸುವ ಮತ್ತು ಉನ್ನತೀಕರಿಸುವ ರಾಷ್ಟ್ರದ ಅಚಲವಾದ ಬದ್ಧತೆಗೆ ಹೃತ್ಪೂರ್ವಕ ಗೌರವಿಸುವುದು ರಾಷ್ಟ್ರೀಯ ಪ್ರತಿಯೊಬ್ಬರ ಕರ್ತವ್ಯವಾಗಿದೆ. 2008ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರೂಪಿಸಿದ ಈ ದಿನವು ಒಂದು ಸ್ಪಷ್ಟವಾದ ಕರೆಯಾಗಿ ಪ್ರತಿಧ್ವನಿಸುತ್ತಿದ್ದು , ಬಾಲಕಿಯರು ಎದುರಿಸುತ್ತಿರುವ ಪರೀಕ್ಷೆಗಳು ಮತ್ತು ಅವರ ಸರ್ವತೋಮುಖ ಬೆಳವಣಿಗೆ ಮತ್ತು ಸಬಲೀಕರಣಕ್ಕಾಗಿ ಮಾರ್ಗಗಳನ್ನು ಹುಡುಕಲು ಸಮಾಜವನ್ನು ಎಚ್ಚರಿಸುತ್ತದೆ.
ರೈಲ್ವೆ ರಕ್ಷಣಾ ದಳದ ಪಾತ್ರ ಮಹತ್ವದ್ದು: ಭಾರತೀಯರ ರೈಲ್ವೇ ಜಾಲದ ವಿಸ್ತಾರದಲ್ಲಿ ಹೆಣ್ಣು ಮಕ್ಕಳನ್ನು ರಕ್ಷಿಸುವ ಮತ್ತು ಸಬಲೀಕರಣಗೊಳಿಸುವ ಪವಿತ್ರ ಕರ್ತವ್ಯವನ್ನು ವಹಿಸಿಕೊಂಡಿರುವ RPF, ಅತೀ ಜಾಗರೂಕತೆಯಿಂದ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿಕೊಂಡಿದೆ. ಎಲ್ಲಾ ಪ್ರಯಾಣಿಕರ ಸುರಕ್ಷತೆಯ ತನ್ನ ಅಚಲ ಬದ್ಧತೆಯ ಜೊತೆಗೆ ಪ್ರತಿಯೊಬ್ಬ ಯುವತಿಯರ ರೈಲಿನ ಪ್ರಯಾಣವು ಸುರಕ್ಷಿತ, ಘನತೆ ಮತ್ತು ಭಯಮುಕ್ತ ಪ್ರಯಾಣಕ್ಕೆ ಕಟ್ಟಿಬದ್ದವಾಗಿ ಶ್ರಮಿಸುವ ಶ್ರೇಯಸ್ಸು ಈ ರೈಲ್ವೆ ಇಲಾಖೆಯ ರೈಲ್ವೆ ರಕ್ಷಣಾ ದಳದಕ್ಕೆ ಸಲ್ಲುತ್ತದೆ. ಅವರ ಪ್ರಾಮಾನಿಕತೆಯಿಂದ ಎಲ್ಲ ಪ್ರಯಾಣಿಕರು ಸುಸಜ್ಜಿತ ಸ್ಥಳಕ್ಕೆ ತಲುಪಲು ಸಹಕಾರಿವಾಗಿದೆ.
ಸಹಾಯವಾಣಿ ಘಟಕಗಳ ಸ್ಥಾಪನೆ: ಪ್ರಮುಖ ರೈಲು ನಿಲ್ದಾಣಗಳಲ್ಲಿ, RPF ಭದ್ರತಾ ಸಿಬ್ಬಂದಿಯಿಂದಲೇ ನಿರ್ವಹಿಸಲ್ಪಡುವ ಸಹಾಯವಾಣಿ ಡೆಸ್ಕ್‌ಗಳನ್ನು ಸ್ಥಾಪಿಸಲಾಗಿದ್ದು, ಪ್ರಯಾಣದ ವೇಳೆಯಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ತಕ್ಷಣದ ನೆರವು ನೀಡುವುದರ ಜೊತೆಗೆ ಅವರ ಸುರಕ್ಷಿತ ಹಿತದೃಷ್ಟಿಯಿಂದ ಪ್ರಯಾಣಕ್ಕೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ತೊಂದರೆಗೊಳಗಾದ ಪ್ರಯಾಣಿಕರು ಭದ್ರತಾ ಸಹಾಯವಾಣಿ ಸಂಖ್ಯೆ 139 ಮೂಲಕ RPF ಅನ್ನು ಸಂಪರ್ಕಿಸಿ, ತಮ್ಮ ದೂರುಗಳಿಗೆ ತಕ್ಷಣದ ಪರಿಹಾರ ಕಂಡುಕೊಳ್ಳಬಹುದಾಗದೆ.
ಆರ್‌ಪಿಎಫ್ (RPF)ದಿಂದ ಸೂಕ್ತ ಜಾಗೃತಿ ಕಾರ್ಯಕ್ರಮಗಳು: ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು RPF ವ್ಯಾಪಕವಾದ ಸಮುದಾಯದತ್ತ ಕಾರ್ಯಕ್ರಮಗಳನ್ನು ನಡೆಸಿ, ಬಾಲಕಿಯರ ಧೈರ್ಯ ತುಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ ಕಾರ್ಯಾಗಾರಗಳು ಮತ್ತು ಸೆಮಿನಾರ್‌ಗಳ ಮೂಲಕ, ಅವರ ಶೋಷಣೆ ಮತ್ತು ನಿಂದನೆಯನ್ನು ತಡೆಗಟ್ಟುವ ಕುರಿತು ಪೋಷಕರು ಮತ್ತು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ನಿರತವಾಗಿದೆ. ಹೆಚ್ಚುವರಿಯಾಗಿ, ರೈಲ್ವೆ ಆವರಣದಲ್ಲಿ ಪ್ರಯಾಣಿಕರ ಜಾಗೃತಿ ವ್ಯವಸ್ಥೆಗಳ ಮೂಲಕ ನಿಯಮಿತ ಪ್ರಕಟಣೆಗಳು ಪ್ರಯಾಣಿಕರಿಗೆ ಮಾಹಿತಿ ನೀಡುವುದರ ಜೊತೆಗೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅನ್ನು ನಿಲ್ದಾಣಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ.
ಆಪರೇಷನ್ ನನ್ನೆ ಫರಿಸ್ತೇ: ಆಪರೇಷನ್ ನನ್ನೇ ಫರಿಸ್ತೇ ಎಂಬುದು ರೈಲ್ವೇ ಜಾಲದಲ್ಲಿ ಮಕ್ಕಳನ್ನು ರಕ್ಷಿಸಲು ಆರ್‌ಪಿಎಫ್ ಹಮ್ಮಿಕೊಂಡಿರುವ ಮಿಷನ್ ಆಗಿದ್ದು. ಅಚಲವಾದ ಸಮರ್ಪಣೆ ಮತ್ತು ಪರಿಶ್ರಮದ ಮೂಲಕ, ಸಾವಿರಾರು ಮಕ್ಕಳನ್ನು ಸಂಭಾವ್ಯ ಹಾನಿಯಿಂದ ರಕ್ಷಿಸಿ, ಸುರಕ್ಷತೆ ಒದಗಿಸಲಾಗಿದೆ. 2024 ರಲ್ಲಿ, ಭಾರತೀಯ ರೈಲ್ವೇಯಾದ್ಯಂತ ಆಪರೇಷನ್ ನನ್ಹೆ ಫರಿಸ್ತೇ ಮೂಲಕ 4472 ಹೆಣ್ಣು ಮಕ್ಕಳು ಸೇರಿದಂತೆ 15703 ಮಕ್ಕಳನ್ನು ರಕ್ಷಿಸಲಾಗಿದೆ.
ಮೇರಿ ಸಹೇಲಿ: ‘ಮೇರಿ ಸಹೇಲಿ’ ಎಂಬ ಉಪಕ್ರಮವು ರೈಲು ಪ್ರಯಾಣದ ಸಮಯದಲ್ಲಿ ಬಾಲಕಿಯರು ಸೇರಿದಂತೆ ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಕೇಂದ್ರೀಕರಿಸಲಾಗಿದ್ದು. ಮಹಿಳಾ RPF ಸಿಬ್ಬಂದಿಗಳ ಸಮರ್ಪಿತ ತಂಡಗಳು ಮಹಿಳಾ ಪ್ರಯಾಣಿಕರೊಂದಿಗೆ ಸಂವಹನ ನಡೆಸುವುದರ ಜೊತೆಗೆ ಅವರ ಭದ್ರತೆಯನ್ನು ಮೂಲ ನಿಲ್ದಾಣದಿಂದ ಗಮ್ಯಸ್ಥಾನದವರೆಗೆ ಖಚಿತಪಡಿಸಲಾಗುತ್ತದೆ . ಪ್ರಸ್ತುತ 250 ಮೇರಿ ಸಹೇಲಿ ತಂಡಗಳು ಪ್ರತಿದಿನ ಕಾರ್ಯನಿರ್ವಹಿಸುತ್ತಿದ್ದು, 2024 ರಲ್ಲಿ, ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 46,64,906 ಒಂಟಿಯಾಗಿ ಪಯಣಿಸುವ ಮಹಿಳಾ ಯಾತ್ರಿಕರ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು RPF ಮೇರಿ ಸಹೇಲಿ ತಂಡವು ಅವಿರತವಾಗಿ ಶ್ರಮಿಸುತ್ತಿದೆ.
ಭೇಟಿ ಬಚಾವೋ ಭೇಟಿ ಪಡಾವೋ: ಭಾರತದ ಗೌರವಾನ್ವಿತ ಪ್ರಧಾನಿಯವರ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಹೆಣ್ಣು ಮಗುವಿನ ಉಳಿವು ಮತ್ತು ರಕ್ಷಣೆ ಮತ್ತು ಶಿಕ್ಷಣವನ್ನು ಉತ್ತೇಜಿಸುವ ‘ಬೇಟಿ ಬಚಾವೋ, ಬೇಟಿ ಪಢಾವೋ’ ಅಭಿಯಾನದಲ್ಲಿ ಆರ್‌ಪಿಎಫ್ ಸಕ್ರಿಯವಾಗಿ ಭಾಗವಹಿಸುತ್ತಿದ್ದು. ವಿವಿಧ ಸಂಘಟನೆಗಳ ಸಹಯೋಗದೊಂದಿಗೆ, ಲಿಂಗ ತಾರತಮ್ಯದ ನಿರ್ಮೂಲನೆ ಮಾಡಲು ಮತ್ತು ಶಿಕ್ಷಣ ಮತ್ತು ವೃತ್ತಿ ಅವಕಾಶಗಳನ್ನು ಒದಗಿಸಲು ಬಾಲಕಿಯರ ಸಬಲೀಕರಣಕ್ಕಾಗಿ ಶ್ರಮಿಸುತ್ತದೆ.
ಮಾನವ ಕಳ್ಳ ಸಾಗಣೆ: ಮಾನವ ಕಳ್ಳಸಾಗಣೆಯ ಅಪಾಯವನ್ನು ಗುರುತಿಸಿದ ಆರ್‌ಪಿಎಫ್ ಪ್ರಮುಖ ರೈಲು ನಿಲ್ದಾಣಗಳಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳನ್ನು ಸ್ಥಾಪಿಸಲಾಗಿದ್ದು . ಈ ಘಟಕಗಳು ಸರ್ಕಾರಿ ರೈಲ್ವೆ ಪೊಲೀಸ್ (GRP), ಸ್ಥಳೀಯ ಪೊಲೀಸ್, ಗುಪ್ತಚರ ಸಂಸ್ಥೆಗಳು, NGOಗಳು ಮತ್ತು ಮಕ್ಕಳ ಕಲ್ಯಾಣ ಸಮಿತಿಗಳು (CWCs) ಜೊತೆಗೂಡಿ ಕಳ್ಳಸಾಗಾಣಿಕೆ ಚಟುವಟಿಕೆಗಳನ್ನು ಪ್ರತಿಬಂಧಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ. ನಿಯಮಿತ ಸಮನ್ವಯ ಸಭೆಗಳು ಈ ಸಮಸ್ಯೆಯನ್ನು ಎದುರಿಸಲು ಮಾಹಿತಿ ಹಂಚಿಕೆ ಮತ್ತು ಕಾರ್ಯತಂತ್ರದ ಯೋಜನೆಯನ್ನು ಸುಗಮಗೊಳಿಸಲಾಗಿದ್ದು, ಭಾರತೀಯ ರೈಲ್ವೇಯಲ್ಲಿ RPF ನ ಒಟ್ಟು 153 ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ, 2024 ರಲ್ಲಿ, AHTU ತಂಡವು 456 ಕಳ್ಳಸಾಗಣೆದಾರರನ್ನು ಬಂಧಿಸುವುದರೊಂದಿಗೆ 99 ಹೆಣ್ಣು ಮಕ್ಕಳು ಸೇರಿದಂತೆ 1511 ಸಂತ್ರಸ್ತರನ್ನು ರಕ್ಷಿಸಲಾಗಿದೆ.
ಬಾಲಕಿಯರ ಸುರಕ್ಷತೆಗೆ ಆರ್‌ಪಿಎಫ್ ವಿಶೇಷ ಒತ್ತು: ರೈಲ್ವೇ ಸಂರಕ್ಷಣಾ ಪಡೆಯ ಅಚಲವಾದ ಸಮರ್ಪಣೆ ಭರವಸೆಯ ಸಾಕ್ಷಿಯಾಗಿದೆ. ನಮ್ಮ ದೇಶದ ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ಕಾಣುವುದರೊಂದಿಗೆ. ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿಲು ಸಂಕಲ್ಪ ಮಾಡಬೇಕಿದೆ. ಅವರಲ್ಲಿರುವ ಭಯವನ್ನು ಹೊಗಲಾಡಿಸಿ ಜಗತ್ತಿನಾಚೆಗೆ ಕೊಂಡೊಯ್ದು ಪ್ರಯತ್ನ ಮಾಡಬೇಕು. ಪ್ರತಿ ಬಾಲಕಿಯರ ಆಕಾಂಕ್ಷೆಗಳು ಅನಿಯಂತ್ರಿತವಾಗಿ ಮೇಲೇರುವ ಭವಿಷ್ಯವನ್ನು ರೂಪಿಸುವುದರೊಂದಿಗೆ ಮುಂದಿನ ಪೀಳಿಗೆಗೆ ಭರವಸೆಯ ಮಾರ್ಗಗಳನ್ನು ಬೆಳಗಿಸೋಣ ಎಂದು ಪ್ರಕಟಣೆಯಲ್ಲಿ ಆರ್ ಪಿಎಪ್ (RPF) ನೈಋತ್ಯ ರೈಲ್ವೆ ವಿಭಾಗದ ಐಜಿ ಆರ್. ಎಸ್ .ಪಿ. ಸಿಂಗ್ ಅವರು ತಿಳಿಸಿದಾರೆ.