ಬೆಳಗಾವಿ: ದೇಶ ಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣನ ಇತಿಹಾಸ ಕೊಡುಗೆ ಬಹು ದೊಡ್ಡದು. ಬಡವರ ಪಾಲಿನ ದೇವರು ಎಂದು ಹೆಸರುವಾಸಿಯಾದ ವೀರ ಶೂರ ಸಿಂಧೂರ ಲಕ್ಷ್ಮಣ ಅವರ ಹೆಸರು ಇವತ್ತಿಗೆ ನಮ್ಮ ರಾಜ್ಯ ಸರ್ಕಾರಕ್ಕೆ ಹಾಗೂ ಕೇಂದ್ರ ಸರ್ಕಾರ ಕಡೆಗಣಿಸಿ ಕಣ್ಣಿದ್ದು, ಕುರಡರಂತೆ ವರ್ತಿಸುತ್ತಿದೆ ಎಂದು ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ್ ಶಿಗಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀರ ಸಿಂಧೂರ ಲಕ್ಷ್ಮಣ ಕೊಡುಗೆಗೆ ಯಾವುದೇ ಸರ್ಕಾರವಾಗಲಿ ಗೌರವ ಸಮರ್ಪಿಸುವ ಕಾರ್ಯ ಮಾಡುತ್ತಿಲ್ಲ. ಅಂತಹ ಇತಿಹಾಸ ಸೃಷ್ಟಿಸಿದ ನಾಯಕನ ಹೆಸರಿನಲ್ಲಿ ಯಾವುದೇ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣ ಮುಖ್ಯ ಸ್ಥಳಗಳಿಗೆ ಅವರ ಹೆಸರು ಮತ್ತು ಮೂರ್ತಿ ಇಲ್ಲ ಇದು ನಮ್ಮ ದುರದೃಷ್ಟ ಎಂದು ಭಾವಿಸುತ್ತೇವೆ .
ಇಂತಹ ಹೋರಾಟಗಾರ, ಮಹಾನ್ ನಾಯಕನ ಹೆಸರು ಬೇಡ ಎನ್ನುವ ಕಾರಣ ಆತನ ಸಮುದಾಯದ ಪೀಳಿಗೆಗೆ, ಸಮಾಜಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ. ಇದರಿಂದ ಸಿಂಧೂರ ಲಕ್ಷ್ಮಣ ಅವರನ್ನು ಕಡೆಗಣಿಸುತ್ತಿದ್ದಾರೆ ಎಂಬುದು ಕಾಣುತ್ತಿದೆ.
ವೀರ ಶೂರ ಸಿಂಧೂರ ಲಕ್ಷ್ಮಣನ ಹೆಸರು ಬೆಳಗಾವಿ ರೈಲು ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಕಳೆದ ಐದು ವರ್ಷಗಳಿಂದ ನಿರಂತರ ಹೋರಾಟ ಮಾಡುವುದಲ್ಲದೆ ಎಲ್ಲ ಸಂಘಟನೆಯ ನೇತೃತ್ವದಲ್ಲಿ ಸಭೆ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ. ಅದಲ್ಲದೆ ಎಲ್ಲ ಸಂಘಟನೆಯ ಮನವಿ ಪತ್ರಗಳಿಂದ ಬೆಳಗಾವಿ ಜಿಲ್ಲಾಧಿಕಾರಗಳ ಮುಖಾಂತರ ಕೇಂದ್ರ ರೈಲ್ವೆ ಸಚಿವರಿಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಾ ನಿರಂತರವಾಗಿ ಪ್ರಯತ್ನ ನಡೆಯುತ್ತಿದೆ .
ಅದಲ್ಲದೆ ಎಲ್ಲ ಶಾಸಕ ಸಚಿವರಿಗೂ ಮನವಿ ಮಾಡಲಾಗಿದೆ. ಆಗಿನ ಸಮಯದಲ್ಲಿ ರೈಲ್ವೆ ಸಚಿವರಾಗಿ ಅಧಿಕಾರದಲ್ಲಿ ಇದ್ದಂತಹ ಸುರೇಶ್ ಅಂಗಡಿ ರವರು ಕೂಡ ಸಿಂಧೂರ ಲಕ್ಷ್ಮಣ ಹೆಸರನ್ನು ನಾಮಕರಣ ಮಾಡಲು ವಿಶ್ವಾಸ ವ್ಯಕ್ತ ಪಡಿಸಿದ್ದರು.
ಆದರೆ ಈಗ ಪ್ರಸ್ತುತ ಸಮಯದಲ್ಲಿ ರೈಲ್ವೆ ಖಾತೆ ಅಧಿಕಾರದಲ್ಲಿರುವ ವಿ.ಸೋಮಣ್ಣ ರವರಿಗೆ ನಾನು (ಮಹೇಶ ಎಸ್ ಶಿಗೀಹಳ್ಳಿ) ಮನವಿ ಮಾಡಿದ್ದೆನೆ. ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ ರವರ ಬೇಟಿಗೆ ಪ್ರಯತ್ನದಲ್ಲಿದ್ದು, ಅಷ್ಟರಲ್ಲಿ ಸಂಸದರಾದ ರೈಲ್ವೆ ಸಚಿವರಾದ ವಿ.ಸೋಮಣ್ಣ ಅವರು ಬೆಳಗಾವಿ ರೈಲು ನಿಲ್ದಾಣಕ್ಕೆ ಬೇರೆ ಹೆಸರನ್ನು ಇಡಲು ಪ್ರಯತ್ನದಲ್ಲಿದ್ದಾರೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ
ವಿ. ಸೋಮಣ್ಣ ರವರಿಗೆ ಕರೆ ಮಾಡಿ ಮಾತನಾಡಿ ತಿಳಿಹೇಳಿ ಮನವಿ ಮಾಡಿಕೊಂಡು ಅವರದ್ದೇ ನಿಲುವು ವ್ಯಕ್ತಪಡಿಸಿದರು.
ಇಷ್ಟು ವರ್ಷಗಳು ಕಷ್ಟ ಪಟ್ಟು ಸ್ವತಂತ್ರ ಹೋರಾಟಗಾರ ದೇಶ ಪ್ರೇಮಿ ವೀರ ಸಿಂಧೂರ ಲಕ್ಷ್ಮಣನ ಹೆಸರು ಬೆಳಗಾವಿ ರೈಲು ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಆಗ್ರಹಿಸಿ ಹೋರಾಟ ಮಾಡುವುದಲ್ಲದೆ ಎಲ್ಲ ಸಚಿವರಿಗೆ ಮನವಿ ಮಾಡಿದ್ದರು ಇದಕ್ಕೆ ವಿ ಸೋಮಣ್ಣ ರವರು ಎಳ್ಳು ನೀರು ಬಿಟ್ಟು ದೇಶ ಪ್ರೇಮಿಗಳಿಗೆ ಸಿಂಧೂರ ಲಕ್ಷ್ಮಣನ ಅಭಿಮಾನಿಗಳಿಗೆ ಮನಸಿಗೆ ನೋವನ್ನು ನೀಡುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ.
ಬೆಳಗಾವಿ ರೈಲು ನಿಲ್ದಾಣಕ್ಕೆ ವೀರ ಸಿಂಧೂರ ಲಕ್ಷ್ಮಣನ ಹೆಸರು ನಾಮಕರಣ ಮಾಡದೆ ಸಿಂಧೂರ ಲಕ್ಷ್ಮಣನಿಗೆ ಅವಮಾನ ಮಾಡುವ ಪ್ರಯತ್ನ ಮಾಡಿದರೆ ಈ ವಿಷಯವಾಗಿ ರೈಲ್ವೆ ಸಚಿವ ವಿ. ಸೋಮಣ್ಣ ಅವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸುತ್ತೇವೆ.
ಸಿಂಧೂರ ಲಕ್ಷ್ಮಣನ ಹೆಸರು ಬೆಳಗಾವಿ ರೈಲು ನಿಲ್ದಾಣಕ್ಕೆ ನಾಮಕರಣ ಮಾಡುವಲ್ಲಿ ನಮಗೆ ಏನಾದರೂ ಅನ್ಯಾಯವಾದರೆ ಇದಕ್ಕೆ ಮೂಲ ಕಾರಣ ಇದಕ್ಕೆ ಧ್ವನಿಗೂಡಿಸದ ಸ್ಥಳೀಯ ಸಚಿವರು, ಶಾಸಕರು, ಸ್ವಾಮಿಗಳು ನೇರ ಹೊಣೆಯಾಗುತ್ತಾರೆ.
ಇನ್ನುಳಿದ ಸಚಿವರಿಗೆ, ಶಾಸಕರಿಗೆ ಸಮುದಾಯದ ಮೇಲಿರುವ ಗೌರವ, ಕಾಳಜಿ ಜವಾಬ್ದಾರಿ, ನಮ್ಮ ಸ್ವಾಮಿಗಳಿಗು, ಸಚಿವರಿಗು, ಶಾಸಕರಿಗೂ ಇರಬೇಕು ಅವರು ಬೆಳಗಾವಿ ರೈಲು ನಿಲ್ದಾಣಕ್ಕೆ ಸಿಂಧೂರ ಲಕ್ಷ್ಮಣ ಹೆಸರು ನಾಮಕರಣ ಮಾಡಲು ಧ್ವನಿಗೂಡಿಸಿದರೆ ಮಾತ್ರ ಈ ಹೋರಾಟಕ್ಕೆ ಇನ್ನಷ್ಟು ಬಲ ಬಂದು ಯಶಸ್ವಿಯಾಗಲಿದೆ ಎಂದು ಸಿಂಧೂರ ಲಕ್ಷ್ಮಣ ಅಭಿಮಾನಿ ಯುವ ಹೋರಾಟಗಾರ ಕ.ಪ.ಪಂ ವಾಲ್ಮೀಕಿ ರಾಜ್ಯ ಯುವ ಘಟಕ ಸಂಘಟನೆಯ ರಾಜ್ಯಾಧ್ಯಕ್ಷ ಮಹೇಶ ಶಿಗಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.