Monday, December 23, 2024
Google search engine
Homeರಾಜಕೀಯಮಹಾರಾಷ್ಟ್ರ ಸಿಎಂ ಫಡ್ನವೀಸ್ ಪಟ್ಟಾಭೀಷೇಕ : ಪ್ರಮಾಣ ವಚನಕ್ಕೆ ಅಂಬಾನಿ ಸೇರಿದಂತೆ ಬಾಲಿವುಡ್ ಚಿತ್ರರಂಗ ಹಾಜರ್

ಮಹಾರಾಷ್ಟ್ರ ಸಿಎಂ ಫಡ್ನವೀಸ್ ಪಟ್ಟಾಭೀಷೇಕ : ಪ್ರಮಾಣ ವಚನಕ್ಕೆ ಅಂಬಾನಿ ಸೇರಿದಂತೆ ಬಾಲಿವುಡ್ ಚಿತ್ರರಂಗ ಹಾಜರ್

ಮುಂಬೈ: ಕಳೆದ 13 ದಿನಗಳಿಂದ ಮಹರಾಷ್ಟ್ರದ ರಾಜಕೀಯ ದೇಶದ ಕುತೂಹಲ ಕೆರಳಿಸಿದ್ದು. ಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಅಧಿಕೃತವಾಗಿ ತೆರೆಬಿದ್ದಿದೆ. ಬಿಜೆಪಿಯ ದೇವೇಂದ್ರ ಫಡ್ನವೀಸ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು. ಶಿವಸೇನೆಯ ಏಕನಾಥ್ ಶಿಂದೆ ಮತ್ತು ಎನ್ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಮುಂಬೈನ ಅಜಾದ್ ಮೈದಾನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಉದ್ಯಮಿ ಮುಖೇಶ್ ಅಂಭಾನಿ ಸೇರಿದಂತೆ ಅನೇಕ ಇಡೀ ಬಾಲಿವುಡ್ ಚಿತ್ರರಂಗ ಹಾಜರಾಗಿದ್ದು. ಶಾರುಖ್ ಖಾನ್, ಸಲ್ಮಾನ್ ಖಾನ್, ರಣಬೀರ್ ಸಿಂಗ್, ರಣನೀರ್ ಕಪೂರ್ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಹಾಜರಾಗಿದ್ದರು. ಅದರ ಜೊತೆಗೆ ಕ್ರೀಡಾ ತಾರೆ ಸಚಿನ್ ತೆಂಡುಲ್ಕರ್ ಸೇರಿದಂತೆ ಗಣ್ಯರು ಆಗಮಿಸಿದರು.

ರಾಜಕೀಯ ಗಣ್ಯರ ದಂಡೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದು. ಮುಂಬೈನ ಅಜಾದ್ ಮೈದಾನದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಅಮಿತ್ ಶಾ, ಆಂದ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಯೋಗಿ ಆದಿತ್ಯನಾಥ್, ನಿತಿಶ್ ಕುಮಾರ್ ಸೇರಿದಂತೆ ಇಡೀ ಕ್ಯಾಬಿನೆಟ್ ಸಚಿವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

RELATED ARTICLES
- Advertisment -spot_img

Most Popular

error: Content is protected !!