ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ “ಮನೆ ಮನೆಗೆ ಗಂಗೆ” ಎಂಬ ಮೂಲ ವಾಕ್ಯದೊಂದಿಗೆ ಜಲ ಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಿದರು.
ಬೆಳಗಾವಿ ಗ್ರಾಮೀಣ ಪ್ರದೇಶದ ಬಂಬರಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ “ಮನೆ ಮನೆಗೆ ಗಂಗೆ” ಹೋಗಿ ” ಮನೆ ಮನೆಗೆ ಕೊಳಚೆ ನೀರು ” ಎಂದು ಮಾರ್ಪಾಡು ಮಾಡಲಾಗಿದೆ. ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿ ಒಳಚರಂಡಿ ಪಕ್ಕದಲ್ಲಿಯೇ ಕುಡಿಯುವ ನೀರಿನ ಪೈಪ್ ಲೈನ್ ಹೋಗಿದ್ದು, ಅದರ ಜೊತೆಗೆ ಕೊಳಚೆಯ ಮತ್ತು ಬಾತ್ ರೂಂ ನೀರು ಮಿಶ್ರಿತವಾಗಿ ಹೋಗುತ್ತಿರುವುದು ಅಮಾನವೀಯ ಸ್ಥಿತಿ ಎದುರಾಗಿದೆ.
ಸ್ಥಳೀಯರ ಕರೆಗೆ ಓಗೊಟ್ಟು ನಾವು ಹೋಗಿ ನೋಡಿದಾಗ ಈ ಎಲ್ಲವೂ ಬೆಳಕಿಗೆ ಬಂದಿದೆ. ಅದರಲ್ಲಿ ಪಿಡಿಓ ಮತ್ತು ಇದರ ಗುತ್ತಿಗೆದಾರರು ನೇರ ಹೊಣೆಗಾರರು ಎಂದು ಸ್ಥಳೀಯರು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಿಷನ್ ಯಾವುದೇ ರೀತಿಯಾಗಿ ಸರಿಯಾಗಿ ಅನುಷ್ಠಾನವಾಗಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಮನೆಯ ಪಕ್ಕದಲ್ಲಿ ಅಳವಡಿಸಬೇಕಾಗಿರುವ ಪೈಪನ್ನು ಒಳಚರಂಡಿ ಮತ್ತು ರಸ್ತೆ ಪಕ್ಕದಲ್ಲಿ ಅಳವಡಿಸಲಾಗಿದೆ.ಅಲ್ಲದೇ ಬಹಳ ಬೇಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ ಕುಡಿಯುವ ನೀರಿನ ಪೈಪನ್ನುನೆಲದ ಒಳಗಡೆ ಅಳವಡಿಸಬೇಕು ಆದರೆ ಇಲ್ಲಿ ನೆಲದ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ.
ಅಲ್ಲದೇ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಗ್ರಾಮಸ್ಥರು ತಮ್ಮ ದುಃಖ ಹೊರಹಾಕಿದ್ದಾರೆ.
ಈ ಯೋಜನೆಯ ಉಸ್ತುವಾರಿ ಮತ್ತು ಮೇಲಾಧಿಕಾರಿಗಳು ಯಾವ ರೀತಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಪರಿಶೀಲನೆ ಮಾಡದೇ ಗುತ್ತಿಗೆದಾರರು ಹೇಳಿದಹಾಗೆ ಕೇಳಿ ದಿಕ್ಕು ತಪ್ಪಿದಂತಾಗಿ ಅನುಮೋದನೆ ನೀಡಿದಾರೆ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ ಎಂದು ಎದ್ದುಕಾಣುತ್ತಿದೆ.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಹಳ ಚಾತುರ್ಯದಿಂದ ಎಲ್ಲರಿಗೂ ಮೂಲಭೂತ ಸೌಕರ್ಯಗಳು ಒದಗಬೇಕೆಂದು ಶ್ರಮಿಸುತ್ತಿದರೆ. ಕೆಳಹಂತದ ಅಧಿಕಾರಿಗಳು ಕವಡೆ ಕಾಸಿನ ಆಸೆಗಾಗಿ ಕರ್ತವ್ಯವನ್ನು ಸರಿಯಾಗಿ ಉಪಯೋಗಿಸುವಲ್ಲಿ ವಿಫಲವಾಗಿದ್ದಾರೆ ಎಂದು ತಿಳಿದುಬರುತ್ತಿದೆ.