ಗೋಕಾಕ : ವೈಯಕ್ತಿಕ ಸಮಸ್ಯೆ ಬಗೆಹರಿಸುವಂತೆ ಪೋಲಿಸ್ ಠಾಣೆಗೆ ಬಂದಿದ್ದ ವ್ಯಕ್ತಿಯೊಬ್ಬ ಪೋಲಿಸರಿಂದ ಯಾವುದೇ ಪರಿಹಾರ ಸಿಗದಿದ್ದಕ್ಕೆ ಠಾಣೆಯ ಮುಂದೆಯೆ ಕೂತು ಮದ್ಯ ಸೇವನೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿರುವ ಪೋಲಿಸ್ ಠಾಣೆಯ ಬಳಿ ಘಟನೆ ನಡೆದಿದ್ದು. ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಸಮಸ್ಯೆಯನ್ನು ಈಡೇರಿಸುವಂತೆ ಗೋಕಾಕ್ ಶಹರ ಪೋಲಿಸ್ ಠಾಣೆ ಬಂದಿದ್ದನು. ಆದರೆ ಈ ವೇಳೆ ಪೋಲಿಸರು ವ್ಯಕ್ತಿಯ ಸಮಸ್ಯೆಗೆ ಸರಿಯಾಗಿ ಸ್ಪಂದಿಸದ ಹಿನ್ನಲೆಯಲ್ಲಿ. ವ್ಯಕ್ತಿ ನೇರವಾಗಿ ರಸ್ತೆ ಬಂದಿದ್ದು. ನಡುರಸ್ತೆಯಲ್ಲೆ ಮದ್ಯ ಸೇವಿಸಲು ಶುರು ಮಾಡಿದ್ದಾನೆ.
ರಸ್ತೆಯಲ್ಲಿ ವಾಹನಗಳು ಸೇವಿಸುತ್ತಿದ್ದರು ಕೇರ್ ಮಾಡದ ವ್ಯಕ್ತಿ ಅಲ್ಲಿಯೆ ಮದ್ಯ ಸೇವಿಸಿದ್ದಾನೆ. ಸದ್ಯ ಪೋಲಿಸರು ಆ ವ್ಯಕ್ತಿಯನ್ನು ಸ್ಥಳದಿಂದ ಎಬ್ಬಿಸಿ ಕಳುಹಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ವ್ಯಕ್ತಿ ಮದ್ಯ ಸೇವಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.