ಬೆಂಗಳೂರು : ಮಠ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಹೊಸ ಹೊಸ ಅಂಶಗಳು ಬೆಳಕಿಗೆ ಬಂದಿದ್ದು. ಆನ್ಲೈನ್ ಜೂಜಾಟದಲ್ಲಿ ತೊಡಗಿದ್ದ ಗುರುಪ್ರಸಾದ್ ಕೋಟ್ಯಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಇದೇ ಅವರ ಆತ್ಮಹತ್ಯೆಗೆ ಕಾರಣವಿರಬಹುದು ಎನ್ನಲಾಗಿದೆ.
ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾದನಾಯಕನಹಳ್ಳಿ ಪೋಲಿಸರಿಗೆ ಗುರುಪ್ರಸಾಧ್ ಕೋಟ್ಯಾಂತರ ರೂಪಾಯಿ ಸಾಲಮಾಡಿಕೊಂಡಿದ್ದರು ಎಂದು ಮಾಹಿತಿ ದೊರೆತಿದ್ದು. ಗುರುಪ್ರಸಾದ್ ಅವರು ಮೊಬೈಲ್ನಲ್ಲಿ ರಮ್ಮಿ ಸರ್ಕಲ್ನಲ್ಲಿ ಜೂಜಾಟ ಆಡುತ್ತಿದ್ದರು. ಜೂಜಾಟವನ್ನೆ ಚಟವಾಗಿಸಿಕೊಂಡಿದ್ದ ಗುರುಪ್ರಸಾದ್ ಅದಕ್ಕಾಗಿ ಸಾಲ ಮಾಡಿಕೊಂಡಿದ್ದರು.
ಸ್ನೇಹಿತರು ಮತ್ತು ಕುಟುಂಬಸ್ಥರಿಂದ ಸಾಲ ಮಾಡಿದ್ದ ಗುರುಪ್ರಸಾದ್, ಫಿಲ್ಮಂ ಮಾಡುತ್ತಿದ್ದೇನೆ ಅದರಿಂದ ಖಂಡಿತಾ ಹಣ ಬರುತ್ತೆ, ಅವಾಗ ವಾಪಾಸ್ ಕೊಡುತ್ತೇನೆ ಎಂದು ಸುಳ್ಳು ಹೇಳಿ ಹಣವನ್ನು ಪಡೆದಿದ್ದರು. ಈ ಹಣವನ್ನು ಜೂಜಾಟದಲ್ಲಿ ತೊಡಗಿಸಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.