ಬೆಳಗಾವಿ: ಬೆಳಗಾವಿಯ ಮಹಾಂತೇಶ ನಗರದಲ್ಲಿ ಕೆಎಂಎಫ್ ಡೈರಿಯ ಬಳಿ ನಡೆದ ಗುಂಡಿನ ದಾಳಿಗೆ ಮತ್ತೊಂದು ಟ್ವಿಸ್ಟ್ ಮತ್ತೆ ನಾಲ್ವರನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 27/11/2024 ರಂದು ಮದ್ಯಾಹ್ನ ಒಂದು ಗಂಟೆಗೆ ಬೆಳಗಾವಿಯ ಆಂಜನೇಯ ನಗರದಲ್ಲಿ ವಾಸವಾಗಿರುವ ಸ್ಮಿತಾ ಸಡೇಕರ ಇವಳ ಮನೇಗೆ ಪ್ರಣೀತ ಹೋಗಿರುತ್ತಾನೆ. ಆ ಸಮಯದಲ್ಲಿ ಪ್ರಣೀತ ತನ್ನ ಹಳೆಯ ಸ್ನೇಹಿತೆ ನಿದಾ ಕಿತ್ತೂರ ಇವಳನ್ನು ನೇನೀಸಿಕೊಂಡು ಸ್ಮಿತಾ ಸಡೆಕರ್ ಹತ್ತಿರು ಹೇಳಿಕೊಂಡು ಅಳುತ್ತಾನೆ.
ಅದೆ ವಿಚಾರವಾಗಿ ಮಾತನಾಡುವ ಸಲುವಾಗಿ ಸ್ಮಿತಾ ನೀದಾಳನ್ನು ತನ್ನ ಮನೆಗೇ 7: 50 ರ ಸುಮಾರಿಗೆ ಕರೆಸಿಂಕೊಂಡಾಗ ನಿದಾ ಕಿತ್ತೂರ, ಮತ್ತು ಆಕೆ ಸಂಬಂಧಿಕರು ಸ್ನೇಹಿತರು ಬಂದು ಪ್ರಣೀತ ಮೇಲೆ ಹೊಡಿಬಡಿ ಹಲ್ಲೆ ಮಾಡಿ ಪಿಸ್ತೂಲನಿಂದ ಕೊಲೆ ಮಾಡುವ ಉದ್ದೇಶದಿಂದ ಗಂಭೀರ ಗಾಯ ಮಾಡಿ ಹೋಗಿರುತ್ತಾರೆ
ಈ ಪ್ರಕರಣದಲ್ಲಿ ಮತ್ತೆ ನಾಲ್ವರನ್ನು ಮತ್ತು ಮೊದಲು ಮೂರು ಒಟ್ಟು ಏಳು ಆರೋಪಿತರನ್ನು ಮಾಳಮಾರುತಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
1. ನಿಧಾ ಮಹಮ್ಮದ್ಅಲಿ ಕಿತ್ತೂರ(31) ಅನ್ನಪೂರ್ಣವಾಡಿ ಬೆಳಗಾವಿ
2. ಜಬಿನ ಅತೀಫ್ ಕಿಣೆಕರ್ (43) ಆಸಾದ್ ಖಾನ ಸೊಸೈಟಿ
3. ಅಮೀರ್ ಮಹಮ್ಮದ್ಅಯೂಬ್ ಕಿತ್ತೂರ (29) ಅನ್ನಪೂರ್ಣವಾಡಿ ಬೆಳಗಾವಿ
4. ಹಾಜರತಅಲಿ ಅಪ್ಪಾಸಾಹೇಬ ಮುಲ್ತಾನಿ (27) ಅಂಬೇಡ್ಕರ ಗಲ್ಲಿ ಕಾಕತಿ ಬೆಳಗಾವಿ
5. ಅಪ್ಸರ ಸುಭಾನಿ ಪಠಾಣ್ (29) ಸದಾಶಿವ ನಗರ ಲಾಸ್ಟ್ ಬಸ್ ಸ್ಟಾಪ್ ಬೆಳಗಾವಿ
6. ಅರ್ಷದ್ ಕಲಿಲ್ಅಹ್ಮದ್ ಖುರೇಶಿ ( 23) ಸಿದ್ದೇಶ್ವರ್ ನಗರ ಕಣಬರ್ಗಿ ಬೆಳಗಾವಿ
7. ರಿಹಾನ್ ತೌಫಿಕ್ ಶಿಕ್ಕಲಗಾರ್ (18) ಶನಿವಾರ ಪೆಟ್ ಮೀರಜ್
ಇವರನ್ನು ಪತ್ತೆ ಹಚ್ಚಿ ದಸ್ತಗೀರ ಮಾಡಿ ಸದರಿಯವರ ತಾಬಾದಲ್ಲಿಂದ ಕಂಟ್ರಿ ಪಿಸ್ತೂಲ್ ಒಂದು ಹಾಗೂ ಎರಡು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣ ಕಾರ್ಯಾಚರಣೆಯಲ್ಲಿ ಹೊನ್ನಪ್ಪ ತಳವಾರ ಪಿಎಸ್ಐ, ಶ್ರೀಶೈಲ ಹುಳಗೆರಿ ಪಿಎಸ್ಐ, ಮತ್ತು ಸಿಬ್ಬಂದಿಯವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಇವರ ಕಾರ್ಯಕ್ಕೆ ಮಾನ್ಯ ಪೊಲೀಸ ಆಯುಕ್ತರು ಬೆಳಗಾವಿ ಇವರು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.