ಬೆಳಗಾವಿ: ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗಾವಿ ಅಂಜುಮನ್ ಬಿಲ್ಡಿಂಗನಲ್ಲಿ ಬರುವ HDFC ಬ್ಯಾಂಕಿನ ಎಟಿಎಂ ನಲ್ಲಿ 8.65.500/-ರೂ ಹಣವನ್ನು ‘ಎಸ್.ಐ.ಎಸ್’ ಪ್ರೋಸಿಗರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಮಾಡುವ ಕೆಲಸಗಾರನಾದ ಕೃಷ್ಣಾ ಸುರೇಶ ದೇಸಾಯಿ (23) ಇವರು ಎಟಿಎಂ ನ ಕಾಂಬಿನೇಷನ್ ಪಾಸ್ವರ್ಡ್ ಬಳಿಸಿ HDFC ಎಟಿಎಂ ದಿಂದ ಹಣವನ್ನು ತೆಗೆದು ಕಳ್ಳತನ ಮಾಡಿಕೊಂಡ ಹೋದ ಬಗ್ಗೆ ಮಾರ್ಕೆಟ್ ಪೊಲೀಸ ಠಾಣೆಯಲ್ಲಿ ಅಪರಾಧ ಸಂಖ್ಯೆ 164/2024 ಕಲಂ:306 ಬಿ.ಎನ್.ಎಸ್-2023 ನೇ ಪ್ರಕಾರ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಆಯುಕ್ತರು ಮತ್ತು ಎಸಿಪಿ ಮಾರ್ಕೆಟ್ ಉಪವಿಭಾಗ ಇವರ ಮಾರ್ಗದರ್ಶನದಲ್ಲಿ ಮಹಾಂತೇಶ ಧಾಮಣ್ಣವರ ಸಿಪಿಐ, ಮಾರ್ಕೆಟ್ ಪೊಲೀಸ್ ಸ್ಟೇಶನ್ ಇವರ ನೇತೃತ್ವದಲ್ಲಿ ತಂಡ ರಚಿಸಿ ಮಹಾಂತೇಶ ಮಠಪತಿ ಪಿಎಸ್ಐ, ವಿಠ್ಠಲ್ ಹವನ್ನವರ್ ಪಿಎಸ್ಐ, ಎಚ್, ಎಲ್, ಕೆರೂರ್ ಪಿಎಸ್ಐ, ಹಾಗೂ ಸಿಬ್ಬಂದಿಗಳಿಂದ ತಂಡ ರಚಿಸಿ ಕಳುವಾದ ಹಣದ ಬಗ್ಗೆ ಹಚ್ಚಿ ಎಟಿಎಂ ನಿಂದ ಕಳ್ಳತನವಾದ ಹಣ 5,74,000/- ರೂ, ಮತ್ತು ಖರೀದಿ ಮಾಡಿದ ಆಭರಣ 20ಗ್ರಾಂ, 1,56,000/- ಹೀಗೆ ಒಟ್ಟು 7,30,000 ವಶಪಡಿಸಿಕೊಂಡಿದ್ದಾರೆ.
ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಕಂಡು ಮಾನ್ಯ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.