ಹಾಸನ: ಮೊದಲ ಕೆಲಸದ ಕರ್ತವ್ಯಕ್ಕೆ ಹಾಜರಾಗಲು ತೆರಳುವ ಸಂದರ್ಭದಲ್ಲೇ ಯುವ ಐಪಿಎಸ್ ಅಧಿಕಾರಿ ಅಪಘಾತಕ್ಕೆ ಬಲಿಯಾಗಿದ್ದಾರೆ.
ಮಧ್ಯಪ್ರದೇಶ ಮೂಲದ ಹರ್ಷವರ್ಧನ ಹಾಸನ ಜಿಲ್ಲೆ ಹೊಳೆನರಸಿಪುರ ಠಾಣೆಯ ಡಿವೈಎಸ್ಪಿ ಆಗಿ ನೇಮಕವಾಗಿದ್ದರು. ಮೈಸೂರಿನಲ್ಲಿ ತರಭೇತಿ ಮುಗಿಸಿ ದಕ್ಷಿಣ ವಲಯ ಐಜಿ ಬೋರಲಿಂಗಯ್ಯ ಅವರನ್ನು ಭೇಟಿ ಮಾಡಿ ಹಾಸನ ಎಸ್ಪಿ ಆದಂತಹ ಸೂಜಿತಾ ಅವರಿಗೆ ಬೇಟಿ ಆಗಿ ವರದಿ ಮಾಡಿಕೊಳ್ಳಲು ಹೋಗುವಾಗ ಜೀಪ್ ಟೈಯರ್ ಬರ್ಸ್ಟ ಆಗಿ ಹರ್ಷವರ್ಧನ ಮತ್ತು ಜೀಪ್ ಚಾಲಕ ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಹರ್ಷವರ್ಧನ ಕೊನೆಯುಸಿರೆಳೆದಿದ್ದಾರೆ.