ಬೆಳಗಾವಿ: ನನ್ನ ಜನರಿಗೆ ಅನ್ಯಾಯದಾಗ ನಾನು ರೇಬಲ್ ಆಗಲೇಬೇಕು.ಅದು ನನ್ನ ಸ್ವಭಾವ ರೇಬಲ್ ಅನ್ನೊದೆ ನನಗೆ ಖಾಯಂ ಸಚಿವ ಸ್ಥಾನವಿದ್ದಂತೆ ವಿದ್ಯಾರ್ಥಿ ಜೀವನದಿಂದ ರಾಜಕಾರಣ ಮಾಡುತ್ತ ಬಂದಿದ್ದು 25 ವರ್ಷದಿಂದಶಾಸಕನಾಗಿದ್ದೇನೆ.
ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶುಕ್ರವಾರದಂದು ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ನೂತನವಾಗಿ ನಿರ್ಮಿಸಿದ ರಾಜಋಷಿ ಶ್ರೀ ಭಗೀರಥರ ಮೂರ್ತಿ ಅನಾವರಣಗೊಳಿಸಿ,ಜಗದ್ಗರು ಶ್ರೀ ಪುರುಷೋತ್ತಮಾನಂದಪುರಿಮಹಾಸ್ವಾಮಿಗಳ ಜಯಂತೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು
ಮಾತನಾಡಿದರು.
ಅದರ ಜೊತೆಯಲ್ಲಿ ನನಗೆ ಕಾಂಗ್ರೆಸ್ ಪಕ್ಷದಲ್ಲೂ ಅನ್ಯಾಯ ಆಗಿದೆ. ಬಿಜೆಪಿ ಕೆಲ ಮುಖಂಡರಿಂದಲೂ
ಪಕ್ಷದಲ್ಲೂ ಅನ್ಯಾಯ ಆಗಿದೆ. ನನ್ನದು
ಹೋರಾಟದ ಬದುಕು. ಹಿಂದುಳಿದ ಜನಾಂಗಗಳನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ.
ಹಿಂದುಳಿದ ಜನಾಂಗ ಸುಮಾರು 74 ಪ್ರತಿಶತ ಹೆಚ್ಚಿದ್ದು ಅವರಿಗೆ ಸೀಗಬೇಕಾದ ಮೀಸಲಾತಿ ಸೀಗುತ್ತಿಲ್ಲ. ಅದರ ಬಗ್ಗೆ ಈಗಾಗಲೇ ಶ್ರೀಗಳ ಸಮ್ಮುಖದಲ್ಲಿ ಚರ್ಚಿಸಿದ್ದೇನೆ.ಅವರೆಲ್ಲರ ಮಾರ್ಗದರ್ಶನ ಪಡೆದು ಬೃಹತ್ ಹೋರಾಟ
ಆಯೋಜಿಸಲಾಗುವದು ಎಂದರು.
ವಿರೋಧ ಪಕ್ಷದಲ್ಲಿದ್ದಾಗ ಬೇರೆ ಮಾತಾಡುತ್ತಾರೆ. ಅಧಿಕಾರಕ್ಕೆ
ಬಂದಾಗ ಮಾತನಾಡಿದ್ದನ್ನು ಕಾರ್ಯರೂಪಕ್ಕೆ ತರುವದಿಲ್ಲ. ನಾವು ನೋಡಿದ ಒಳ್ಳೆಯ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು, ಅವರಂತೆ ನಾನು ನುಡಿದಂತೆ ನಡೆಯುತ್ತಿದ್ದೇನೆ.ಹಿಂದುಳಿದ ವರ್ಗಗಳ ಮಠಾಧೀಶರು ಸಂಕಷ್ಟ ಸಮಯದಲ್ಲಿ ನನ್ನ ಮನೆಗೆ ಬಂದು ಸಂತೈಸುವ ಕೆಲಸ ಮಾಡಿದರು. ಆಗ ಎಲ್ಲ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸಿ ನಾನು ಹೆದರುವದಿಲ್ಲ ಎಂದು ಹೇಳಿದೆ. ಹಿಂದುಳಿದವರಿಗೆ ಅನ್ಯಾಯವಾಗಲು ಯಾವತ್ತೂ ಬಿಡುವದಿಲ್ಲ ನಾನು ಹೋರಾಟದ ಮೂಲಕ ಹಿಂದುಳಿದ ಹತ್ತು ಲಕ್ಷಕ್ಕೂ ಜನರನ್ನು ಸೀರಿಸಿ ಪ್ರತಿಭಟಿಸುವೆ ಎಂದು ಹೇಳಿದರು.