Wednesday, June 18, 2025
Google search engine
Homeವೈರಲ ಸುದ್ದಿRCBಮತ್ತೇ RCB ನಾಯಕತ್ವ ವಹಿಸಿಕೊಳ್ಳುತ್ತಾರ ವಿರಾಟ್​ ? ಮ್ಯಾನೇಜ್​ಮೆಂಟ್​ನಿಂದ ಮನವಿ
spot_img

ಮತ್ತೇ RCB ನಾಯಕತ್ವ ವಹಿಸಿಕೊಳ್ಳುತ್ತಾರ ವಿರಾಟ್​ ? ಮ್ಯಾನೇಜ್​ಮೆಂಟ್​ನಿಂದ ಮನವಿ

ಐಪಿಎಲ್ 2025ರ ಸೀಸನ್ ಆರಂಭಕ್ಕೆ ಎಲ್ಲಾ ಫ್ರಾಂಚೈಸಿಗಳು ತಯಾರಿ ಆರಂಭಿಸದ್ದು. ಅಕ್ಟೋಬರ್ 31 ರಂದು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ. ಯಾವ ತಂಡ ಯಾರನ್ನು ಉಳಿಸಿಕೊಳ್ಳುತ್ತವೆ ಎನ್ನುವ ಕುತೂಹಲ ಹೆಚ್ಚಾಗಿದ್ದು. ಆರ್ಸಿಬಿ ತಂಡದಲ್ಲಿ ಯಾರೆಲ್ಲಾ ಉಳಿಯುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ಮಧ್ಯ ದೊಡ್ಡ ಸುದ್ದಿಯೊಂದು ಸಿಕ್ಕಿದ್ದು. ವಿರಾಟ್ಕೊಹ್ಲಿ ಮತ್ತೇ ಆರ್ಸಿಬಿ ತಂಡದ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ ಎಂದು ವರದಿಯಾಗಿದೆ.

2021 ರ ಐಪಿಎಲ್ ಆವೃತ್ತಿ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದರು. ಐಪಿಎಲ್ ಮಾತ್ರವಲ್ಲದೆ ಭಾರತ ಏಕದಿನ ಮತ್ತು ಟಿ20 ತಂಡದ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದರು. ಆದರೆ ಈಗ 2024ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ಬಳಿಕ ನಿವೃತ್ತಿ ಘೋಷಿಸಿದ್ದರು. ಈಗ ಅಂತರ್ ರಾಷ್ಟ್ರೀಯ ಕ್ರಿಕೆಟ್ಗೆ ವಿಧಾಯ ಹೇಳಿರುವ ಕೊಹ್ಲಿ ಹೊರೆ ಕಡಿಮೆಯಾದ ಹಿನ್ನಲೆ ಮತ್ತೆ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂಬ ಮಾಹಿತಿ ದೊರಕಿದೆ.

ಈಗಾಗಲೇ ಆರ್ಸಿಬಿ ಮ್ಯಾನೇಜ್ಮೆಂಟ್ ಕೊಹ್ಲಿಯ ಜೊತೆ ಚರ್ಚಿಸಿದ್ದು. ಫಾಪ್ ಡುಪ್ಲೆಸಿಗೆ 40 ವರ್ಷವಾದ ಹಿನ್ನಲೆ ಮತ್ತೆ ವಿರಾಟ್ ಕೊಹ್ಲಿಯವರಿಗೆ ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿದೆ ಎಂಬ ಮಾಹಿತಿ ದೊರೆತಿದೆ.

RELATED ARTICLES
- Advertisment -spot_img

Most Popular

error: Content is protected !!