Monday, December 23, 2024
Google search engine
Homeಕ್ರೈಂನಾಳೆ ದಾಸ ದರ್ಶನ್​ ಭವಿಷ್ಯ ನಿರ್ಧಾರ : ಹೈಕೋರ್ಟ್​ನಿಂದ ಸಿಗುತ್ತಾ ಬೇಲ್​ ?

ನಾಳೆ ದಾಸ ದರ್ಶನ್​ ಭವಿಷ್ಯ ನಿರ್ಧಾರ : ಹೈಕೋರ್ಟ್​ನಿಂದ ಸಿಗುತ್ತಾ ಬೇಲ್​ ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹೈಕೋರ್ಟ್ನಿಂದ ಜಾಮೀನಿನ ನಿರೀಕ್ಷೆಯಲ್ಲಿದ್ದು. ಇಂದು ವಾದ ಮಾಡಿದ ದರ್ಶನ್ ಪರ ವಕೀಲ ದರ್ಶನ್ಗೆ ಇರುವ ಬೆನ್ನು ನೋವಿನ ಸಮಸ್ಯೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು, ದರ್ಶನ್ಗೆ ಜಾಮೀನು ನೀಡಬೇಕು ಎಂದು ವಾದ ಮಾಡಿದರು.

ಮಧ್ಯಾಹ್ನ ಹೈಕೋರ್ಟ್ನಲ್ಲಿ ವಾದ ಮಾಡಿದ ಸಿ.ವಿ ನಾಗೇಶ್. ದರ್ಶನ್ಗೆ ಇರುವ ಆರೋಗ್ಯ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಈ ಹಿಂದೆ ದರ್ಶನ್ಗೆ ಹಿಪ್ ಜಾಯಿಂಟ್ ಸಮಸ್ಯೆಯಿದ್ದು ಅವರು ಅದರ ಕುರಿತು ಚಿಕಿತ್ಸೆ ಪಡೆಯುತ್ತಿದ್ದರು. ಈಗ ಅವರ ಸ್ಪೈನಲ್ ಕಾರ್ಡಿನಲ್ಲಿ ಸಮಸ್ಯೆಯಿದ್ದು ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಹೇಳಿರುವದರಿಂದ ಅವರಿಗೆ ಜಾಮೀನು ನೀಡಬೇಕು ಎಂದು ಕೋರಿದರು.

 

ವಾದ ಪ್ರತಿವಾದ ಆಲಿಸಿರುವ ಕೋರ್ಟ್ ನಾಳೆಗೆ ತೀರ್ಪನ್ನು ಕಾಯ್ದಿರಿಸಿದ್ದು. ಬೇಲ್ ಸಿಗುವ ನಿರೀಕ್ಷೆಯಲ್ಲಿರುವ ದರ್ಶನ್ಗೆ ನಾಳೆ ಅತ್ಯಂತ ಪ್ರಮುಖ ದಿನವಾಗಿದೆ.

RELATED ARTICLES
- Advertisment -spot_img

Most Popular

error: Content is protected !!