Monday, December 23, 2024
Google search engine
Homeಅಂಕಣವೈರಿಗಳಿಗೆ ಎದೆಯೊಡ್ಡಿ ದೇಶದ ಗಡಿ ಕಾಯ್ದ ಸೈನಿಕನ ಸೇವೆ ಶ್ಲಾಘನೀಯ..

ವೈರಿಗಳಿಗೆ ಎದೆಯೊಡ್ಡಿ ದೇಶದ ಗಡಿ ಕಾಯ್ದ ಸೈನಿಕನ ಸೇವೆ ಶ್ಲಾಘನೀಯ..

ವೈರಿಗಳಿಗೆ ಎದೆಯೊಡ್ಡಿ ದೇಶದ ಗಡಿ ಕಾಯ್ದ ಸೈನಿಕನ ಸೇವೆ ಶ್ಲಾಘನೀಯ..

ಸೈನಿಕ ಸೇವಾ ನಿವೃತ್ತಿ ನಂತರ ಸಮಾಜ ಕಾಯುವ ನಾಯಕ ಆಗಬೇಕು.

ಮಡಿವಾಳೇಶ್ವರ ಮಠದ ಪೀಠಾದಿಪತಿ ಗಂಗಾಧರ ಸ್ವಾಮೀಜಿ.

ಬೈಲಹೊಂಗಲ: ತಾಯ್ನಾಡಿನ ರಕ್ಷಣೆಗಾಗಿ ಸೈನ್ಯ ಸೇರಿ ಸೇವಾ ನಿವೃತ್ತಿಯವರೆಗೆ ಸುದೀರ್ಘವಾಗಿ ವೈರಿಗಳ ಜೋತೆ ಸದಾ ಹೋರಾಟ ನಡೆಸಿ ಸುರಕ್ಷಿತವಾಗಿ ಮನೆಗೆ ಬಂದ ನಂತರ  ತಮ್ಮ ಕುಟುಂಬದ ಜೋತೆ ಸುಖಜೀವನ ನಡೆಸುವದರೊಂದಿಗೆ ಸಮಾಜ ಸೇವೆಗೆ ಸೈನಿಕರ ಬದುಕು ಮುಡಪಾಗಿರಬೇಕೆಂದು ಗುರು ಮಡಿವಾಳೇಶ್ವರ ಮಠದ ಪೀಠಾದಿಪತಿ ಗಂಗಾಧರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಹೊಸೂರ ಗ್ರಾಮದ ಸೈನಿಕ ಫಕೀರಪ್ಪ ಕುರಿ ಅವರು 18ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಅಲ್ಲಿಸಿ ನಿವೃತ್ತಿಯಾದ ಪ್ರಯುಕ್ತ ಗ್ರಾಮದ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸೇವಾನಿವೃತ್ತ ಅಭಿನಂದನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ, ಭಾರತದ ರಕ್ಷಣೆಗೆ ಸೇರಿದ ನಂತರ ಸೈನಿಕರ ಜೀವನ ದೇಶಕ್ಕಾಗಿ ಸಮರ್ಪಿತವಾಗಿರುತ್ತದೆ.

ಸದಾ ವೈರಿಗಳ ಗುಂಡಿನ ಕಾಳಗದಲ್ಲಿ ಜೀವವನ್ನು ಪಣಕ್ಕಿಟ್ಟು ಸದಾ  ಹೋರಾಟಮಾಡುವ ಅವರ ಧೈರ್ಯ, ಶೌರ್ಯ ಅವರ ಸಾಹಸ ಮೆಚ್ಚುವಂತದ್ದು ಎಂದರು.

ಮುಖ್ಯ ಅತಿಥಿಯಾಗಿದ್ದ ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್‌ ಸಿದ್ದ‌ನಗೌಡರ ಮಾತನಾಡಿ, ತಂದೆ, ತಾಯಿ ಹೆಂಡತಿ  ಮಕ್ಕಳು ಹಾಗೂ ಬಂಧುಗಳ ಪ್ರತಿ ವಾತ್ಸಲ್ಯದಿಂದ ವಂಚಿತವಾದರು ದೇಶ ಸೇವೆ ಮಾಡುವ ಮಹಾದಾಸೆಯಿಂದ ಭಾರತಾಂಭೆಯ ರಕ್ಷಣೆಗಾಗಿ ಸೈನ್ಯ ಸೇರುವ ಯುವಕರ ಶಿಸ್ತುಬಧ್ದ ಜೀವನ ನಾಗರಿಕ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾದದ್ದು.

ಅವರ ಸಮಯ ಪ್ರಜ್ಞೆ ಕೆಲಸದ ಅಚ್ಚುಕಟ್ಟುತನ, ದೇಹ ದೃಢತೆಯ ಉತ್ತಮ ಆರೋಗ್ಯವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ದಿನದ 24 ಘಂಟೆಗಳ ಕಾಲ ಗಡಿಯಲ್ಲಿ ಮಳೆ, ಮೈ ಕೊರೆಯುವ ಮೈನಸ್ 24ಡಿಗ್ರಿ  ಚಳಿಯಲ್ಲಿ 48ಡಿಗ್ರಿ ಬಿಸಿಲಿನಲ್ಲಿ  ಸದಾ ಗಡಿಕಾಯುವ ಫಲದಿಂದ ಇಂದು ದೇಶದ ಜನತೆ ನೆಮ್ಮದಿ ಜೀವನ ಸಾಗಿಸುತಿದ್ದೆವೆ.

ಪ್ರಪಂಚದಲ್ಲಿ ಇಂದು ಭಾರತದ ಸೈನ್ಯ ಅತ್ಯಂತ ಉಚ್ಚಸ್ಥಿತಿಗೆ ಬಂದಿದೆ, ಅಂತಹ ಬಲಾಡ್ಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ಗ್ರಾಮಕ್ಕೆ ಆಗಮಿಸಿದ ಫಕೀರಪ್ಪ ಕುರಿಯ ನಿವೃತ್ತಿ ಜೀವನ ಸುಖಸಮೃದ್ದಿಯಿಂದ ಕೂಡಿರಲಿ, ಸೈನ್ಯ ಸೇರಲು ಬಯಸುವ ಗ್ರಾಮದ ಯುವಕರಿಗೆ ಅವರ ಮಾರ್ಗದರ್ಶನ ಇರಲಿ, ಸಮಾಜಕ್ಕೆ ಅವರ ಸೇವೆ ಅತ್ಯಂತ ಅವಶ್ಯಕವಾಗಿದ್ದು ಆ ನಿಟ್ಟಿನಲ್ಲಿ  ಕಾರ್ಯಪ್ರವರ್ತರಾಗಲಿ ಎಂದರು.

ಗ್ರಾಮದ ಮುಖಂಡರಾದ ಗುರುಪಾದ ಕಳ್ಳಿ, ಮಹಾಂತೇಶ ಮತ್ತಿಕೊಪ್ಪ, ಮಲ್ಲಿಕಾರ್ಜುನ ಹುಂಬಿ ಮಾತನಾಡಿ ದೇಶದಲ್ಲಿ ರಕ್ಷಣೆಗಾಗಿ ಸೈನಿಕ, ಅನ್ನಕ್ಕಾಗಿ ರೈತ, ಆರೋಗ್ಯಕ್ಕಾಗಿ ವೈಧ್ಯ ಮತ್ತು ಶಿಕ್ಷಣಕ್ಕಾಗಿ ಶಿಕ್ಷಕರು ಸಲ್ಲಿಸುವ ಇವರ ಕಾರ್ಯಾ ಅತ್ಯಂತ ಶ್ಲಾಘನೀಯ ಎಂದರು.

ವೇದಿಕೆಯ ಮೇಲೆ ಸೋಮಪ್ಪ‌ ಕುರಿ, ಯಲ್ಲವ್ವ ಕುರಿ, ಶತಾಯುಷಿ ಸೊಮವ್ವ ಕುರಿ,  ಮಾಜಿ ಸೈನಿಕರ ಸಮನ್ವಯ ಸಮೀತಿ ಅಧ್ಯಕ್ಷ ಬಿ.ಬಿ.ಬೋಗೂರ, ಮಾಜಿ ಗ್ರಾಪಂ ಅಧ್ಯಕ್ಷರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..

 

RELATED ARTICLES
- Advertisment -spot_img

Most Popular

error: Content is protected !!