ಬೆಳಗಾವಿಯಲ್ಲಿ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಲಸಿಕಾ ಅಭಿಯಾನ..
ಮಾಜಿ ಶಾಸಕ ಅನಿಲ ಬೇನಕೆ, ನಗರ ಸೇವಕ ಜಯತೀರ್ಥ ಅವರಿಂದ ಚಾಲನೆ..
ಮುಂಜಾಗ್ರತಾ ಕ್ರಮಕ್ಕೆ ಇಲಾಖೆ, ಅಧಿಕಾರಿಗಳು, ಜನಪ್ರತಿನಿಧಿಗಳ ಸತತ ಪ್ರಯತ್ನ..
ಸಾರ್ವಜನಿಕರ ಜಾಗರೂಕತೆಯೂ ಅವಶ್ಯ..
ಬೆಳಗಾವಿ : ಇತ್ತೀಚೆಗೆ ಮಳೆಗಾಲ ಪ್ರಾರಂಭ ಆದಾಗಿನಿಂದ ನಮ್ಮ ಜಿಲ್ಲೆಯಷ್ಟೇ ಅಲ್ಲದೇ ಇಡೀ ರಾಜ್ಯದ ತುಂಬಾ ಅಪಾಯಕಾರಿಯಾದ ಡೆಂಗ್ಯೂ ಜ್ವರದ ಭೀತಿ ಶುರುವಾಗಿದ್ದು, ಈಗಾಗಲೇ ಹಲವು ಚಿಕ್ಕ ಮಕ್ಕಳನ್ನು ಈ ಮಹಾಮಾರಿ ಕಾಯಿಲೆ ಬಲಿ ಪಡೆದಿದ್ದು, ಎಲ್ಲರೂ ಇದರ ಬಗ್ಗೆ ಮುಂಜಾಗ್ರತೆ ವಹಿಸಿಕೊಳ್ಳುವುದು ಅವಶ್ಯಕವಾಗಿದೆ..
ಅದೇ ನಿಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಜನಜಾಗೃತಿ ನಡೆಯುತ್ತಿದ್ದು, ನಗರ ಸೇವಕರು ತಮ್ಮ ವಾರ್ಡಿನಲ್ಲಿ ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ, ಈ ನಿಟ್ಟಿನಲ್ಲಿ ವಾರ್ಡ ಸಂಖ್ಯೆ 04ರ ನಗರ ಸೇವಕರಾದ ಜಯತೀರ್ಥ ಸವದತ್ತಿ ಅವರು ತಮ್ಮ ವಾರ್ಡಿನ ಹಾಗೂ ಇತರ ಸಾರ್ವಜನಿಕರಿಗೆ ಡೆಂಗ್ಯೂ ನಿಯಂತ್ರಣ ಹನಿಗಳನ್ನು ಹಾಕುವ ಕಾರ್ಯ ಮಾಡಿದ್ದಾರೆ..
ಬುಧವಾರ ದಿನಾಂಕ 03/07/2824 ರಂದು, ನಗರದ ಮಾಜಿ ಶಾಸಕರಾದ ಅನಿಲ ಬೇನಕೆ ಅವರ ನೇತೃತ್ವದಲ್ಲಿ ನಗರದ ತಿಲಕ ಚೌಕನಲ್ಲಿ ಲಸಿಕಾ ವಿತರಣಾ ವೇದಿಕೆ ನಿರ್ಮಿಸಿಕೊಂಡು, ಆಸಕ್ತಿ ಇರುವ ಎಲ್ಲಾ ಸಾರ್ವಜನಿಕರಿಗೂ ಡೆಂಗ್ಯೂ ನಿಯಂತ್ರಣ ಲಸಿಕೆಯನ್ನು ಹಾಕಿದ್ದು, ಉತ್ತಮ ಕಾರ್ಯವಾಗಿದ್ದು ಎಲ್ಲಾ ವಾರ್ಡಿನ ನಗರಸೇವಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಂತಹ ಪ್ರಯತ್ನ ಮುಂದುವರೆಸುವ ಅವಶ್ಯಕತೆ ಇದೆ..
ರಾಜ್ಯಾದ್ಯಂತ ಅಪಾಯಕಾರಿಯಾಗಿ ಹರಡುತ್ತಿರುವ ಈ ಡೆಂಗ್ಯೂ ಕಾಯಿಲೆಯ ನಿಯಂತ್ರಣಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಮೇಲಿಂದ ಮೇಲೆ ಸಭೆಗಳನ್ನು ಮಾಡುತ್ತಿದ್ದು, ಪರಿಣಾಮಕಾರಿಯಾಗಿ ಹತೋಟಿಗೆ ತರುವ ಪ್ರಯತ್ನ ಮಾಡುತ್ತಿದ್ದು, ಅದರಲ್ಲಿ ಯಶಸ್ವಿಯಾಗಬೇಕಿದೆ, ಜೊತೆಗೆ ಸಾರ್ವಜನಿಕರು ತಾವು ಇರುವ ಕಡೆಗೆ ಸ್ವಚ್ಚತೆ ಕಾಪಾಡಿಕೊಂಡು, ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಹೋಗಿ, ತಮ್ಮ ಜವಾಬ್ದಾರಿಯನ್ನು ಅರಿತು ಜಾಗರೂಕತೆಯಿಂದ ಇದ್ದರೆ, ಇಂತಹ ಜೀವಹಾನಿ ಕಾಯಿಲೆಯಿಂದ ದೂರ ಇರಬಹುದು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..