Monday, December 23, 2024
Google search engine
Homeಕ್ರೀಡೆಚೆನ್ನೈ ವಿರುದ್ಧ 27 ರನ್​ನಿಂದ ಗೆದ್ದು ಬೀಗಿದ ಬೆಂಗಳೂರು; ಪ್ಲೇ ಆಫ್​ಗೆ ಆರ್​​ಸಿಬಿ ಗ್ರ್ಯಾಂಡ್​ ಎಂಟ್ರಿ!

ಚೆನ್ನೈ ವಿರುದ್ಧ 27 ರನ್​ನಿಂದ ಗೆದ್ದು ಬೀಗಿದ ಬೆಂಗಳೂರು; ಪ್ಲೇ ಆಫ್​ಗೆ ಆರ್​​ಸಿಬಿ ಗ್ರ್ಯಾಂಡ್​ ಎಂಟ್ರಿ!

ಬೆಂಗಳೂರು:  ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಮಾಡು ಇಲ್ಲವೇ ಮಾಡಿ ಪಂದ್ಯದಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ.

ಬೆಂಗಳೂರು ನೀಡಿದ 219 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಚೆನ್ನೈ ಸೂಪರ್​ ಕಿಂಗ್ಸ್​ ಪರ ಓಪನರ್​ ಆಗಿ ಬಂದ ರುತುರಾಜ್​ ಗಾಯಕ್ವಾಡ್​​ ಡಕೌಟ್​ ಆದ್ರು. ರಾಚಿನ್​ ರವೀಂದ್ರ ತಾನು ಆಡಿದ 37 ಬಾಲ್​ನಲ್ಲಿ 3 ಭರ್ಜರಿ ಸಿಕ್ಸರ್​​, 5 ಫೋರ್​ ಸಮೇತ 61 ರನ್​​ ಸಿಡಿಸಿ ವಿಕೆಟ್​ ಒಪ್ಪಿಸಿದ. ರಹಾನೆ 33, ಜಡೇಜಾ 42, ಎಂ.ಎಸ್​​ ಧೋನಿ 25 ರನ್​ ಹೊಡೆದ್ರು. ಚೆನ್ನೈ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 191 ರನ್​​ ಗಳಿಸಿದೆ. ಆರ್​​ಸಿಬಿ ಚೆನ್ನೈ ವಿರುದ್ಧ 27 ರನ್​ನಿಂದ ಗೆದ್ದು ಪ್ಲೇ ಆಫ್​ಗೆ ಕ್ವಾಲಿಫೈ ಆಗಿದೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಆರ್​​ಸಿಬಿ ಪರ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ್ರು.

ತಾನು ಆಡಿದ 29 ಬಾಲ್​ನಲ್ಲಿ ಬರೋಬ್ಬರಿ 4 ಸಿಕ್ಸರ್​ ಜತೆಗೆ 3 ಫೋರ್​ ಸಿಡಿಸಿದ್ರು. ಬರೋಬ್ಬರಿ 47 ರನ್​ ಸಿಡಿಸಿ ಕೇವಲ ಮೂರು ರನ್​ಗಳಿಂದ ಅರ್ಧಶತಕ ವಂಚಿತರಾದ್ರು. ಸಿಕ್ಸ್​ ಹೊಡೆಯಲು ಹೋಗಿ ಔಟಾದ್ರು. ಸ್ಲೋ ಪಿಚ್​ ಮಧ್ಯೆಯೂ ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 162ಕ್ಕೂ ಹೆಚ್ಚಿತ್ತು.

ಇನ್ನು, ಕೊಹ್ಲಿ ಔಟಾದ ಬಳಿಕ ಫಾಫ್​ ಡುಪ್ಲೆಸಿಸ್​​​ ಭರ್ಜರಿ ಬ್ಯಾಟಿಂಗ್​ ಮುಂದುವರಿಸುತ್ತಿದ್ದರು. ತಾನು ಎದುರಿಸಿದ 39 ಬಾಲ್​ನಲ್ಲಿ 3 ಸಿಕ್ಸರ್​​, 3 ಫೋರ್​ ಸಮೇತ 54 ರನ್​​ ಚಚ್ಚಿದ್ರು.

ಆದ್ರೆ, ರಜತ್​ ಪಾಟಿದಾರ್​ ಹೊಡೆತಕ್ಕೆ ಬೈ ಮಿಸ್​ ಆಗಿ ರನ್​ ಔಟ್​ ಆಗಿದ್ದಾರೆ. ರಜತ್​ ಪಾಟಿದಾರ್​ ಸ್ಟ್ರೈಟ್​​ ಹಿಟ್​ ಹೊಡೆದ್ರು. ಬಾಲ್​​ ಬೌಲರ್​ ಕೈ ಟಚ್​ ಆಗಿ ವಿಕೆಟ್​ಗೆ ಬಿದ್ದಿದೆ. ಫಾಫ್​ ಔಟ್​​ ಅಲ್ಲದೇ ಹೋದ್ರೂ ಹೇರ್​​ನಲ್ಲಿತ್ತು ಬ್ಯಾಟ್​ ಎಂದು ರನೌಟ್​ ನೀಡಿದ್ರು.

ಬಳಿಕ ತನ್ನ ಬ್ಯಾಟಿಂಗ್​ ಆರ್ಭಟ ಮುಂದುವರಿಸಿದ ರಜತ್​ ಪಾಟಿದಾರ್ ಕೇವಲ 23 ಬಾಲ್​ನಲ್ಲಿ 4 ಸಿಕ್ಸರ್​​, 2 ಫೋರ್​ನೊಂದಿಗೆ 41 ರನ್​ ಚಚ್ಚಿದ್ರು. ಕೊನೆವರೆಗೂ ಕ್ರೀಸ್​ನಲ್ಲಿದ್ದ ಕ್ಯಾಮೆರಾನ್​ ಗ್ರೀನ್​​ 17 ಬಾಲ್​ನಲ್ಲಿ 3 ಸಿಕ್ಸರ್​​, 3 ಫೋರ್​ನೊಂದಿಗೆ 38 ರನ್​ ಬಾರಿಸಿದ್ರು.

ಕೊನೆಗೆ ಬಂದ ದಿನೇಶ್​ ಕಾರ್ತಿಕ್​​ 1 ಸಿಕ್ಸ್​​, 1 ಫೋರ್​​ ಸಮೇತ 14 ರನ್​ ಗಳಿಸಿದ್ರು. ಮ್ಯಾಕ್ಸಿ ಕೇವಲ 5 ಬಾಲ್​ನಲ್ಲಿ 1 ಸಿಕ್ಸರ್​, 2 ಫೋರ್​​ ಜತೆಗೆ 16 ರನ್​​​ ಚಚ್ಚಿದ್ರು. ಆರ್​​​ಸಿಬಿ ನಿಗದಿತ 20 ಓವರ್​​ನಲ್ಲಿ 218 ರನ್​​ ಕಲೆ ಹಾಕಿತ್ತು.

RELATED ARTICLES
- Advertisment -spot_img

Most Popular

error: Content is protected !!