Tuesday, December 24, 2024
Google search engine
Homeಸುದ್ದಿಸಮರ್ಥವಾಗಿ ಜಿಲ್ಲೆಯನ್ನು ಪ್ರತಿನಿಧಿಸುವ ಸಾಮರ್ಥ್ಯ ಮೃಣಾಲ್ ಹೆಬ್ಬಾಳಕರ್ ಗೆ ಇದೆ - ಚನ್ನರಾಜ ಹಟ್ಟಿಹೊಳಿ

ಸಮರ್ಥವಾಗಿ ಜಿಲ್ಲೆಯನ್ನು ಪ್ರತಿನಿಧಿಸುವ ಸಾಮರ್ಥ್ಯ ಮೃಣಾಲ್ ಹೆಬ್ಬಾಳಕರ್ ಗೆ ಇದೆ – ಚನ್ನರಾಜ ಹಟ್ಟಿಹೊಳಿ

ಬೆಳಗಾವಿ:  ಮೇ 7ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಪರ ಸವದತ್ತಿ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಪ್ರಚಾರ ಸೋಮವಾರ ಪ್ರಚಾರ ಸಭೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಕ್ಷೇತ್ರಾದ್ಯಂತ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಗೊರಾಬಾಳ ಮತ್ತು ಬಸಿಡೋಣಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಿರೀಕ್ಷೆಗೂ ಮೀರಿ ಜನರು ಬೆಂಬಲ ಸೂಚಿಸುತ್ತಿದ್ದಾರೆ. ಮೃಣಾಲ ಹೆಬ್ಬಾಳಕರ್ ಅತ್ಯಂತ ಪ್ರಚಂಡ ಬಹುಮತದಿಂದ ಆಯ್ಕೆಯಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಜನರ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಮೃಣಾಲ ಹೆಬ್ಬಾಳಕರ್ ಯುವಕನಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹಲವು ಕನಸನ್ನು ಕಟ್ಟಿಕೊಂಡಿದ್ದಾನೆ.
ಅತ್ಯಂತ ಸಮರ್ಥವಾಗಿ ಜಿಲ್ಲೆಯನ್ನು ಪ್ರತಿನಿಧಿಸುವ ಸಾಮರ್ಥ್ಯ ಹೊಂದಿದ್ದಾನೆ. ಹಾಗಾಗಿ ಎಲ್ಲರೂ ಮೃಣಾಲ ಹೆಬ್ಬಾಳಕರ್ ಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ಅವರು ಕೋರಿದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕ್ಷೇತ್ರ ರಾಜ್ಯದಲ್ಲೇ ಮಾದರಿಯಾಗುತ್ತ ಮುನ್ನಡೆದಿದೆ. ಅದೇ ಮಾದರಿಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಮಾಡಲು ಮೃಣಾಲ ಹೆಬ್ಬಾಳಕರ್ ಅವರನ್ನು ಬೆಂಬಲಿಸೋಣ ಎಂದರು.
ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಮಾತನಾಡಿ, ಕಳೆದ 10 ವರ್ಷದಿಂದ ನಾನು ಸಕ್ರೀಯವಾಗಿ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಕ್ಷೇತ್ರದ ಸಮಸ್ಯೆ ಮತ್ತು ಜನರ ಬೇಕು ಬೇಡಗಳನ್ನು ತಿಳಿದುಕೊಂಡಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಸ್ಪಷ್ಟ ಯೋಚನೆಯನ್ನು ಹೊಂದಿದ್ದೇನೆ. ಹಾಗಾಗಿ ನನಗೆ ಮತ ನೀಡಿ ಅವಕಾಶ ಮಾಡಿಕೊಟ್ಟಲ್ಲಿ ಜನರು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿ ತೋರಿಸುತ್ತೇನೆ ಎಂದರು.
   ಶಿವಪ್ಪ ಸುಬ್ಬರ, ಬಸಯ್ಯ ಮಠಪತಿ, ದುಂಡಪ್ಪ ಖನವಿ, ಗಾಜಿ ವಕೀಲರು, ರಾಮನಗೌಡ ತಿಪ್ಪರಾಶಿ, ರಾಜು ಕಗದಾಳ, ಡಿ.ಡಿ.ಟೋಪೋಜಿ, ಬಸವರಾಜ ಆಯಟ್ಟಿ, ಗೋಪಾಲ ದಳವಾಯಿ,  ಪತ್ರೆಪ್ಪ ಚಿಕ್ಕುಂಬಿ, ಶ್ರೀಕಾಂತ ನೇಗಿನಾಳ, ಈರಪ್ಪ ಕೊಡ್ಲಿ, ಮಹಾರಾಜಗೌಡ ಪಾಟೀಲ, ಮುತ್ತು ಬಾಂಗಿಡದ,  ಲಕ್ಕಪ್ಪ ಸುಬ್ಬರ,  ಹನಮಂತ ಮುಳ್ಳೂರ್, ಎಂ.ಎಸ್.ಜಾವೂರ್, ಸಿದ್ದು ಶಿರಹಟ್ಟಿ,  ದ್ಯಾಮಣ್ಣ ಮ್ಯಾದಾರ್ ಮುಂತಾದವರು ಇದ್ದರು.
RELATED ARTICLES
- Advertisment -spot_img

Most Popular

error: Content is protected !!