ಬೆಳಗಾವಿ: ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ನೂತನವಾಗಿ ಆಯ್ಕೆಯಾದ ಮಹಿಳಾ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಜಿಲ್ಲಾ ಅಧ್ಯಕ್ಷರಾದ ಶ್ರೀ ಸುಭಾಸ ಪಾಟೀಲ ಅವರು ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ಮಹಿಳೆಯರ ಸಂಘಟನೆ ಬಲಪಡಿಸಬೇಕು.
ಮಹಿಳೆಯರಿಗಾಗಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಜನಪರ ಯೋಜನೆಗಳನ್ನು ನಾವು ನಿವೆಲ್ಲರೂ ಪ್ರತಿ ಮತದಾರನಿಗೆ ತಿಳಿಸಿ ಮತ್ತೋಮ್ಮೆ ಮೋದಿಜೀ ಅವರನ್ನು ಪ್ರಧಾನಿಯನ್ನಾಗಿಸಲು ಪಣ ತೊಡೊಣ ಎಂದು ಹೇಳಿದರು.
ಈ ವೇಳೆ ವಿಭಾಗ ಸಂಘಟನಾ ಕಾರ್ಯದರ್ಶಿಗಳು ಶ್ರೀ ಜಯಪ್ರಕಾಶ್ ಮಾತನಾಡಿ ಪಕ್ಷದ ಅಭ್ಯರ್ಥಿ “ಕಮಲ” ಎಂಬುದನ್ನು ಮಾತ್ರ ತಲೆಯಲ್ಲಿಟ್ಟು ಕೆಲಸ ಮಾಡೋಣ ಅಭ್ಯರ್ಥಿ ಯಾರೆ ಆಗಲಿ ಸಿದ್ದಾಂತವನ್ನು ಪಾಲಿಸುವುದು ನಮ್ಮ ಕರ್ತವ್ಯ.
ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬ ನಾಯಕರಾಗಬಹುದು ಇದಕ್ಕೆ ಅನೇಕ ನಿದರ್ಶನಗಳು ನಿಮ್ಮ ಕಣ್ಣು ಮುಂದಿವೆ ಎಂದರು.ದೇಶದ ಅಭಿವೃದ್ಧಿಗೆ ಮತ್ತೋಮ್ಮೆ ನಾವೇಲ್ಲರೂ ಸಾಂಘೀಕ ಪ್ರಯತ್ನ ಮಾಡಿ ಮೋದಿಜೀ ಅವರನ್ನು ಗೆಲ್ಲಿಸಲು ಕರೆ ನೀಡಿದರು, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ನಯನಾ ಭಸ್ಮೆ ಮಾತನಾಡಿ ಮಹಿಳೆಯಗಾಗಿ ಉಜ್ವಲ ಯೋಜನೆ, ಮಹಿಳೆಯರ ಬಾಳಿಗೆ ದಾರಿದೀಪವಾಗಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಶ್ರೀ ಸಂದೀಪ್ ದೇಶಪಾಂಡೆ. ಶ್ರೀ ಕೆ. ವ್ಹಿ ಪಾಟೀಲ ಹಾಗೂ ಪಕ್ಷದ ಪದಾಧಿಕಾರಿಗಳು ಮಹಿಳಾ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.