ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೆಳಗಾವಿ ಗ್ರಾಮೀಣ ತಾಲೂಕಿನ ಆಯ್ದ 48 ಗ್ರಾಮ ಪಂಚಾಯತ್ ಗ್ರಂಥಪಾಲಕರಿಗೆ ಬೆಳಗಾವಿ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಫೌಂಡೇಶನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ಹಾಗೂ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯ ಅಧ್ಯಕ್ಷತೆಯನ್ನು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಮರೆಡ್ಡಿ ಸರ್ ಅವರು ವಹಿಸಿದ್ದರು.
ಶಿಕ್ಷಣ ಫೌಂಡೇಶನನ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಶ್ರೀ ಶ್ರೀಶೈಲ ಅಥಣಿ ಪ್ರೇರಣಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಬಾಳಪ್ಪ ಮಡಿವಾಳರ ಜಿಲ್ಲೆಯ ವಿವಿಧ ತಾಲೂಕಿನ ತಾಲೂಕು ಸಂಯೋಜಕರಾದ ಶ್ರೀಮತಿ ಶಿವಲೀಲಾ ನರಸನ್ನವರ, ವೀರಣ್ಣ ಗುಂಡಗಾಂವಿ, ಶ್ರೀ ಮಹದೇವ ಮಲಶೆಟ್ಟಿ, ಶ್ರೀಮತಿ ಶ್ರೀದೇವಿ ಬೈಲವಾಡ ಮತ್ತು ತಾಲೂಕಿನ ಗ್ರಂಥಾಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು. ಬಾಳಪ್ಪ ಮಡಿವಾಳರ ಇವರು ಶಿಕ್ಷಣ ಫೌಂಡೇಶನ್ ಹಿನ್ನೆಲೆ ಬೆಳೆದು ಬಂದ ಹಾದಿ ಸಂಸ್ಥೆಯ ವಿವಿಧ ಕಾರ್ಯಕ್ರಮಗಳ ಪರಿಚಯ ಮಾಡಿಕೊಟ್ಟರು. ನಂತರ ಇ.ಓ ಸರ್ ಅವರು ಹಿತನುಡಿಗಳನ್ನಡಿದರು. ಜಿಲ್ಲಾ ಸಂಯೋಜಕರು ಶ್ರೀಶೈಲ ಅಥಣಿ ಸರ್ ಅವರು ಕಂಪ್ಯೂಟರ್ ಮೂಲ ವಿಷಯಗಳಾದ ಎಂ.ಎಸ್. ಆಫೀಸ್,ಇಮೇಲ್, ಪಿಡಿಎಫ್, ಕನ್ನಡ ಟೈಪಿಂಗ್ ಇನ್ನು ಹಲವಾರು ಡಿಜಿಟಲ್ ಸಾಕ್ಷರತೆಯ ಬಗ್ಗೆ ತಿಳಿಸಿಕೊಟ್ಟರು.
ಶಿಕ್ಷಣ ಪೀಡಿಯ ಅಪ್ಲಿಕೇಶನ್ ಬಗ್ಗೆ ಮಾಹಿತಿ ನೀಡಿದರು . ಶಿಕ್ಷಣ ಪಿಡಿಯ ಅಪ್ಲಿಕೇಶನ್ ಅಕಾಡೆಮಿಕ್ಸ್, ಡಿಜಿಟಲ್ ಸ್ಕಿಲ್ಸ್ ಹಾಗೂ ಸ್ಟೋರೀಸ್ ಎಂಬ 3 ಭಾಗಗಳನ್ನು ಒಳಗೊಂಡಿದ್ದು ಅಕಾಡೆಮಿಕ್ಸ್ ಅಲ್ಲಿ 8,9,10,11 ನೆಯ ತರಗತಿಯ ಪಠ್ಯ ಪುಸ್ತಕದ ಪಾಠಗಳ ವಿಡಿಯೋ ಗಳಿದ್ದು, ಸ್ಕಿಲ್ಸ್ ಅಲ್ಲಿ ಡಿಜಿಟಲ್ ಸಾಕ್ಷರತೆ ಬಗ್ಗೆ ಅಂದರೆ ಡಿವೈಸ್ , ಡಿವೈಸ ಸೆಪ್ಟಿ,ಹಾರ್ಡ್ವೇರ್ ಅಂಡ್ ಸಾಪ್ಟ್ವೇರ್, ಇಂಟರ್ನೆಟ್, ಇಮೇಲ್, ಗೂಗಲ್ ಡ್ರೈವ್ ಹಾಗೂ ಇನ್ನಿತರ ಡಿಜಿಟಲ್ ಸಾಕ್ಷರತೆ ಬಗ್ಗೆ ವಿಡಿಯೋ ಗಳನ್ನು ನೀಡಲಾಗಿದೆ. ಹಾಗೂ ಸ್ಟೋರೀಸ್ ಅಲ್ಲಿ ಚಿಕ್ಕ ಮಕ್ಕಳಿಗಾಗಿ ಕಥೆಗಳನ್ನು ನೀಡಲಾಗಿದ್ದು.
ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಮತ್ತು ತಮ್ಮ ವೃತ್ತಿ ಜೀವನಕ್ಕೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ಅಳವಡಿಸಲಾಗಿದೆ . ಇದರ ಮುಖಾಂತರ ಗ್ರಾಮೀಣ ಭಾಗದ ಮಕ್ಕಳು ಪ್ರಯೋಜನ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿಕೊಟ್ಟರು .