ಪ್ರಶಾಂತ ಹಿರೇಮನಿ
ಅಥಣಿ: ಪಟ್ಟಣದ ಜತ್ತ ರಸ್ತೆಗೆ ಹೊಂದಿಕೊಂಡಿರುವ ಮುಸ್ಲಿಂ ಬಾಂಧವರ ಪ್ರಾರ್ಥನಾ ಸ್ಥಳವಾದ ಈದ್ಗಾ ಮೈದಾನ ಸೇರಿದಂತೆ ಅಥಣಿ ಪಟ್ಟಣದಲ್ಲಿನ ಅಲ್ಪಸಂಖ್ಯಾತರು ಹೆಚ್ಚಿರುವ ವಿವಿಧ ಬಡಾವಣೆಗಳಲ್ಲಿ ಸರ್ಕಾರದ ಅಲ್ಪಸಂಖ್ಯಾತರ ನಿಧಿ ಯೋಜನೆ ಅಡಿ 5 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಲಭ್ಯ ಕಲ್ಪಿಸುವ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಾಜಿ ಉಪ ಮುಖ್ಯಮಂತ್ರಿಗಳು ಹಾಲಿ ಶಾಸಕರಾದ ಲಕ್ಷ್ಮಣ ಸವದಿ ಭೂಮಿಪೂಜೆ ನೆರವೇರಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ಅಲ್ಪಸಂಖ್ಯಾತರ ನಿಧಿಯಿಂದ 5 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನ ಸರ್ಕಾರದ ಏಜೆನ್ಸಿಯಾಗಿರುವ ಕೆ ಆರ್ ಡಿ ಸಿ ಎಲ್ ಸಂಸ್ಥೆಗೆ ಒಹಿಸಲಾಗಿದ್ದು ಅಲ್ಪಸಂಖ್ಯಾತರು ಹೆಚ್ಚು ಇರುವ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳಿಗೆ ಇಂದು ಚಾಲನೆ ನಿಡಲಾಗಿದ್ದು ರಂಜಾನ್ ತಿಂಗಳು ಅಂತ್ಯದ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ವಕ್ಫ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಆಸೀಫ ತಾಂಬೊಳಿ, ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷ ಸಯ್ಯದ್ ಅಮಿನ ಗದ್ಯಾಳ, ಅಸ್ಲಂ ನಾಲಬಂದ, ಮುಸ್ತಾಕ್ ಮುಲ್ಲಾ, ದತ್ತಾ ವಾಸ್ಟರ್, ಮಾಜಿ ಪುರಸಭೆ ಅಧ್ಯಕ್ಷ ದಿಲೀಪ ಲೊಣಾರಿ, ರಾಜು ಬುಲಬುಲೆ, ಸಂತೋಷ ಸಾವಡಕರ್, ರಾವಸಾಬ ಐಹೊಳೆ, ಮಲ್ಲು ಹುದ್ದಾರ್, ಬೀರಪ್ಪ ಯಕ್ಕಂಚಿ, ಬಾಬು ಗದ್ಯಾಳ್, ಬಾಬು ಮುಲ್ಲಾ, ಅಕ್ಬರ್ ಮುಲ್ಲಾ, ಶಫಿ ಮುಲ್ಲಾ ರಿಯಾಜ್ ಸನದಿ, ಅಬ್ದುಲ ಅಜೀಜ್ ಮುಲ್ಲಾ, ಆಬಿದ ಮಾಸ್ಟರ್, ಇಲಿಯಾಸ್ ಹಿಪ್ಪರಗಿ, ಬಾಬು ಖೆಮಲಾಪೂರ್, ಐ.ಜಿ . ಬಿರಾದಾರ್, ಇರ್ಷಾದ್ ಮನಗೂಳಿ, ಸಲಾಂ ಕಲ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.