ಬೆಳಗಾವಿ:- ಸಾರ್ವಜನಿಕರು ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಯಿಂದ ಕಚೇರಿಗೆ ಅಲೆದಾಡಿ ಹೈರಾಣಾಗಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳು ತ್ವರಿತವಾಗಿ ಆಗಬೇಕೆಂದರೆ ಸರ್ಕಾರಿ ಮಾತ್ರವಲ್ಲದೆ ಇತರೆ ಹೆಚ್ಚುವರಿ ಹಣ ನೀಡಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಅದೇ ರೀತಿಯಲ್ಲಿ ಬೆಳಗಾವಿಯ ಸಿ.ಟಿ. ಸರ್ವೇಯಲ್ಲಿ ಕೂಡ ಬಿಂದಾಸಾಗಿ ಲಂಚಾ ಅವತಾರ ನಡೆಯುತ್ತಿದೆ.
ಸಿಟಿಎಸ್ ಕಚೇರಿಯಲ್ಲಿ ಬೆಳಗಾವಿ ನಗರದ ವಾರ್ಡಗಳನ್ನು ನಿಯಮಿತವಾಗಿ ಸರ್ವೇಯರಗಳಿಗೆ ಹಂಚಿಕೆ ಮಾಡಿರುತ್ತಾರೆ. ಕಚೇರಿಯಲ್ಲಿ ಏಳು ಕ್ಯಾಬಿನ್ ಗಳಿದ್ದು, ಪ್ರತಿಯೊಂದು ಕ್ಯಾಬಿನಗಳಲ್ಲಿ ಒಂದು ಒಂದೂ ಗೊಳುಗಳಿವೆ. ಜನ ಸಾಮಾನ್ಯರು ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಕ್ಯಾಬಿನ್ ಸುತ್ತ ಮುತ್ತ ಅಲ್ಲೆದಾಡುವುದು ಬಿಟ್ಟು ಬೇರೆ ದಾರಿಯೇ ಇಲ್ಲದಂತಾಗಿದೆ.
ಸಾರ್ವಜನಿಕರು ತಮ್ಮ ಕೆಲಸಗಳನ್ನು ಬಿಟ್ಟು ಪ್ರತಿ ನಿತ್ಯ ಅಲ್ಲೇದಾಡಿದರೂ ಕವಡೆ ಕಾಸಿನ ಕಿಮ್ಮತು ಇಲ್ಲದೆ ಹಾಗೇ ನಾಳೆ ಬಾ ಎಂದು ಕ್ಯಾಬಿನ್ ನಿಂದ ಉತ್ತರ ಬರುತ್ತವೆ. ಪ್ರತಿ ದಿನ ಅದೇರಾಗ ಅದೇ ಹಾಡು ಹೀಗೆ ಅವರಿಗೆ ಕಾಂಚಾಣ ಸಿಗುವರೆಗೆ ಅಲ್ಲದಾಡುವುದು ಮಾತ್ರ ತಪ್ಪಿದಲ್ಲ.
ಕೈ ಬಿಸಿಯಾದರೂ ಸಾರ್ವಜನಿಕರ ಅಲೇದಾಟ ತಪ್ಪಿದಲ್ಲ. ಒಂದು ಪ್ಲಾಟನ್ನು ಜಿಲ್ಲಾ ನೋಂದಣಿ ಕಚೇರಿಯಲ್ಲಿ ಸರ್ಕಾರದ ವೆಚ್ಚವನ್ನು ಭರಿಸಿ ತದನಂತರ ಸಿಟಿ ಎಸ್ ಕಚೇರಿಯಲ್ಲಿ ಸರ್ಕಾರದ ಗಡುವಿನ ನಿಯಮದ ಪ್ರಕಾರವಾಗಿ ಹೆಸರು ನೋಂದಣಿ ಮಾಡಿಕೊಡಲು ಸರ್ಕಾರಿ ಶುಲ್ಕ ಬಿಟ್ಟು ಹೆಚ್ಚುವರಿಯಾಗಿ ಹಣ ನೀಡಲೇಬೇಕಾಗಿದೆ.
ಅಲ್ಲದೇ ಸರ್ಕಾರದ ಗಡುವಿನ ಪ್ರಕಾರ 30-45 ದಿನಗಳ ನಂತರ ಪಹಣಿ ಮೇಲೆ ಹೆಸರು ದಾಖಲಿಸಲು ನಿಯಮಗಳಿದ್ದರೂ ಹೆಸರು ನೊಂದಣಿ ಮಾಡಲು ತಿಂಗಳು ವರ್ಷಗಳ ಕಾಲ ಕಾಯಬೇಕಾಗಿದೆ.
ಕಚೇರಿಯಲ್ಲಿ ಸಿಸ್ಟಮ್ ಮಾದರಿಯ ಭ್ರಷ್ಟಾಚಾರ ನಡೆಯುತ್ತಿದೆ. ಪ್ರತಿಯೊಂದು ಕ್ಯಾಬಿನ್ ಕಲೆಕ್ಷನ್ ಮೇಲಾಧಿಕಾರಿಗಳ ಜೇಬಿನವರೆಗೆ ಹೋಗುವ ಸಂಪ್ರದಾಯ ರೂಡಿಯಲ್ಲಿರುವುದು ಆಚರಿಯ ಸಂಗತಿಯಾಗಿದೆ.
ಪಕ್ಕದಲ್ಲಿಯೇ ಲೋಕಾಯುಕ್ತ ಕಚೇರಿಯಿದ್ದರೂ ರಾಜಾರೋಷವಾಗಿ ಯಾವುದೇ ಭಯವಿಲ್ಲದೇ ಲಂಚಾವತಾರ ನಡೆಯುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜನರು ಹೇಳುವ ಹಾಗೇ ಕಚೇರಿಯಲ್ಲಿ ಗಣ್ಯ ಮಾನ್ಯರು, ಬಿಲ್ಡರ್ ಹಾಗೂ ರಾಜಕೀಯ ಬೆಂಬಲವಿರುವ ಕೆಲಸಗಳು ಮಾತ್ರ ತುರಾತುರಿಯಲ್ಲಿ ಮಾಡಿಕೊಡುವುದಲ್ಲದೇ ಅವರುಗಳ ಮನೆಯವರೆಗೆ ಪಹಣಿಗಳು ತಲುಪಿಸುವ ಕೆಲಸ ಇವರದ್ದಾಗಿದೆ.
ಕಚೇರಿಯ ವೇಳೆಯಲ್ಲಿ ಅಧಿಕಾರಿಗಳಾದ ಎಡಿ ಎಲ್ ಆರ್ ಅವರು ಬೆಳಿಗ್ಗೆ 10 -30 ಗಂಟೆಗೆ ಕಚೇರಿ ತೆರೆದರೂ ಕೂಡಾ ಅಧಿಕಾರಿಗಳು 12 ಗಂಟೆಯಾದರು ಖುರ್ಚಿ ಮೇಲೆ ಇರುವುದಿಲ್ಲ.
ಇವರು ಕಚೇರಿಯಲ್ಲಿ ಕೆಲಸ ಮಾಡುವ ಸಮಯವೇ ಬೇರೆಯಾಗಿದೆ. ಸಂಜೆ 6 ಗಂಟೆಯ ನಂತರ ರಾತ್ರಿ 9 ಗಂಟೆಯವರೆಗೆ ದಲ್ಲಾಳಿಗಳ ಜೊತೆ ದಲ್ಲಾಳಿಗಳು ನೀಡುವ ಕಾಂಚಣಕ್ಕಾಗಿ ಕಚೇರಿಯ ಕೆಲಸ ಮಾಡುತ್ತಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಸರ್ಕಾರದ ಕೆಲಸ ದೇವರ ಕೆಲಸ ಎಂದು ತಮ್ಮ ಕರ್ತವ್ಯ ನಿರ್ವಹಿಸುವುದು ಬಿಟ್ಟು ಅವರುಗಳ ನೀಡುವ ಎಂಜಲಿ ಕಾಸಿಗೆ ಜೋತು ಬಿದ್ದಿರುವುದು ವಿಷಾದನೀಯ ಸಂಗತಿಯಾಗಿದೆ. ಒಟ್ಟಾರೆಯಾಗಿ ಇಂತಹ ಕಚೇರಿಗಳಿಗೆ ಅಲೆದಾಡುವ ಬಡ ಜನರ ಕಷ್ಟಗಳನ್ನು ಕೇಳುವವರೇ ಇಲ್ಲದಂತಾಗಿದೆ.
***