ಬೈಲಹೊಂಗಲ: ಬೆಳಗಾವಿ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ ಪಾಟೀಲ ಅವರ ನೇತೃತ್ವದಲ್ಲಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮತಗಳ್ಳತನ ವಿರುದ್ಧ ಪೋಸ್ಟರ್ ಅಭಿಯಾನ ನಡೆಸಿದರು.
ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಾರ್ತಿಕ ಪಾಟೀಲ ಮಾತನಾಡಿ, ” 2024 ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯು ಮತಗಳ್ಳತನ ಮೂಲಕ ರಾಜ್ಯದ ಜನರಿಗೆ ವಂಚಿಸಿ ಗೆಲುವು ಸಾಧಿಸಿದೆ. ಇದರ ಬಗ್ಗೆ ತನಿಖೆ ನಡೆಸಬೇಕು ಹಾಗೂ ಜನರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.
ಚುನಾವಣಾ ಆಯೋಗ ಬಿಜೆಪಿಗೆ ಸಿಮೀತವಾಗಿಲ್ಲ, ಸಂವಿಧಾನಡಿ ಕೆಲಸ ಮಾಡಬೇಕಿದೆ. ಎಲ್ಲಾ ಸಾಕ್ಷಗಳಿವೆ ಎಂದು ನಾಯಕ ರಾಹುಲ್ ಗಾಂಧಿ ನೇರಾನೇರ ಪ್ರಶ್ನೆಸಿದ್ದಾರೆ. ಇದಕ್ಕೆ ಬಿಜೆಪಿಯವರು ಉತ್ತರಬೇಕು ಎಂದು ಹೇಳಿದರು.
ಈ ವೇಳೆ ಸುನೀಲ ಹಲಗಿ, ದಾದಾಫೀರ್ ಜಮಾದಾರ, ಸಮಿ ಮಕಾನದಾರ, ಶಿವಾನಂದ ಹಂಪಣ್ಣವರ, ಅರ್ಬಾಜ್ ಮುಲ್ಲಾ, ಶ್ರೀಕಾಂತ ಸುಂಕದ, ಮಹೇಶ ಕಿವಡಿ, ಪ್ರೀತಂ ಬೆಳಗಾವಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಇತರರು ಇದ್ದರು.