ಬೆಳಗಾವಿ: ನಿನ್ನೆ ರಾತ್ರಿ ಮಳೆಯ ಅಬ್ಬರಕ್ಕೆ ಜೆಸಿಎಸ್ ಆವರಣದಲ್ಲಿನ ಉರ್ದು ಶಾಲೆಯ ಕೊಠಡಿ ಮೇಲೆ ಬೃಹತ್ ಆಕಾರದ ಮಾವಿನ ಮರ ಬಿದ್ದು ಸಂಪೂರ್ಣ ಕೊಠಡಿ ಹಾನಿಯಾಗಿರುವ ಘಟನೆ ಖಾನಾಪೂರ ತಾಲೂಕಿನ ನಂದಗಡದ ಗ್ರಾಮದಲ್ಲಿ ನಡೆದಿದೆ .
ಅದೃಷ್ಟವಶಾತ್ ಶಾಲೆ ಪ್ರಾರಂಭವಾಗುವ ಮೊದಲೇ ಈ ಘಟನೆ ನಡೆದಿದೆ. ಕೊಠಡಿಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಾರೆ. ಶಾಲಾ ಪ್ರಾರಂಭದ ಸಮಯದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರ ಬಂದು ನೋಡಿದರೆ ಒಂದು ದೊಡ್ಡ ಮಾವಿನ ಮರವೇ ಕೊಠಡಿಯಲ್ಲಿ ಬಿದ್ದು ಹಾನಿಯಾಗಿರುವುದು ಕಂಡು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ನಂದಗಡ ವಲಯ ಅರಣ್ಯಾಧಿಕಾರಿ ಕಾರ್ಯಾಲಯದ ಅಧಿಕಾರಿಗಳು ಬಿದ್ದ ಗಿಡ ತೆರವುಗೊಳಿಸಲು ಮುಂದಾಗಿದ್ದಾರೆ.ನಂದಗಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.