ಬೆಳಗಾವಿ: ಬಸ್ ಬಿಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ತಡೆವ ಮೂಲಕ ಬುಧುವಾರ ಪ್ರತಿಭಟಿಸಿದರು.
ಬೆಳಗಾವಿ ತಾಲೂಕಿನ ಸುವರ್ಣಸೌಧ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಬೇಕೆ ಬೇಕು ಬಸ್ ಬೇಕು ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.
ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಮಾಡುತ್ತಿರೋ ಶಾಲಾ ವಿದ್ಯಾರ್ಥಿಗಳಿಗೆ ಪೋಷಕರು ಬೆಂಬಲ ನೀಡಿದರು.ಹೆದ್ದಾರಿಯಲ್ಲಿ ಒಂದು ಕಿಮೀಗೂ ಅಧಿಕ ಟ್ರಾಫಿಕ್ ಜಾಮ್,ವಾಹನ ಸವಾರರ ಪರದಾಡಿದರು.
ನಮ್ಮ ಊರಿಗೆ ಬಗಳ ದಿನಗಳಿಂದ ಬಸ್ ಇಲ್ಲ ನಮ್ಮಗೆ ಶಾಲೆಗೆ ಹೋಗಲು ತುಂಬಾ ತೊಂದರೆ ಆಗುತ್ತಿದೆ. ಅದರಿಂದ ನಮ್ಮ ವಿದ್ಯಾ ಅಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಮತ್ತು ದಿನಾಲು ನಾವು ಶಾಲೆಗೆ ಲೆಟ್ ಮಾಡಿ ಹೋದರೆ ಶಿಕ್ಷರು ಬೈಯುತ್ತಾರೆ. ನಮ್ಮಗೆ ಬಸ್ ಬಿಡಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.
ಹಿರೇಬಾಗೆವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.