Sunday, October 12, 2025
Google search engine
Homeಜಿಲ್ಲಾವಿದ್ಯುತ್ ತಗಲಿ ಹೆಸ್ಕಾಂ ಸಿಬ್ಬಂದಿ ಸಾವು
spot_img

ವಿದ್ಯುತ್ ತಗಲಿ ಹೆಸ್ಕಾಂ ಸಿಬ್ಬಂದಿ ಸಾವು

: ವಿದ್ಯುತ್ ಕಂಬದಲ್ಲಿ ಹೆಸ್ಕಾಂ ಸಿಬ್ಬಂದಿ ಮೃತದೇಹ ಜೋತಾಡಿದ ಘಟನೆ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ. ಇಷ್ಟೇಲ್ಲಾ ಆದರೂ ಸ್ಥಳಕ್ಕೆ ಅಧಿಕಾರಿಗಳು ಬಂದಿಲ್ಲ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಗರನಾಳ ಗ್ರಾಮದ ಹೆಸ್ಕಾಂ ಸಿಬ್ಬಂದಿ ಮಾರುತಿ ಹವಲಿ(25) ಮೃತ ದುರ್ದೈವಿ. ಮುಗಳಿಹಾಳ ಗ್ರಾಮದಲ್ಲಿ ವಿದ್ಯುತ್ ಕಂಬದ ಮೇಲೆ ಹತ್ತಿ ಕೆಲಸ ಮಾಡುವಾಗ ಅವಘಡ ಸಂಭವಿಸಿದೆ. ಏಕಾಏಕಿ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.

3 ಗಂಟೆಯಿಂದ ಮೃತದೇಹ ವಿದ್ಯುತ್ ಕಂಬದ ಮೇಲೆ ಜೋತಾಡುತ್ತಿದ್ದರೂ ಹೆಸ್ಕಾಂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಿಲ್ಲ ಎಂದು ಮುಗಳಿಹಾಳ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಸವದತ್ತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -spot_img

Most Popular

error: Content is protected !!