ಬೆಳಗಾವಿ: ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯ ಪದಾಧಿಕಾರಿಗಳ ಪದಗ್ರಹಣ ಹಾಗೂ ಕುಂದು ಕೊರತೆಗಳ ಮುಖ್ಯ ಸಭೆ ನಗರದ ಪ್ರವಾಸಿಮಂದಿರದಲ್ಲಿ ನಡೆಯಿತು.
ನೂತನವಾಗಿ ಸಂಘಟನೆ ಪದಾಧಿಕಾರಿಗಳಾಗಿ ಆಯ್ಕೆಯಾದ ರಾಜ್ಯ ಉಪಾಧ್ಯಕ್ಷರು ಮಲ್ಲಿಕಾರ್ಜುನ್ ಹೆಗ್ಗನಾಯಕ, ಬೆಳಗಾವಿ ತಾಲೂಕು ಅಧ್ಯಕ್ಷರಾಗಿ ಮಂಗೇಶ್ ಚನ್ನಿಕುಪ್ಪಿ ಮತ್ತು ಬೆಳಗಾವಿ ತಾಲೂಕು ಉಪದ್ಯಕ್ಷರಾಗಿ ಮುತ್ತುರಾಜ್ ಹೊಸಗಟ್ಟಿ, ರಾಮದುರ್ಗ ತಾಲೂಕು ಅಧ್ಯಕ್ಷರಾಗಿ ಮಂಜುನಾಥ್ ಹನಸಿ, ಯರಗಟ್ಟಿ ತಾಲೂಕು ಪ್ರಧಾನ ಸಂಚಾಲಕರಾಗಿ ರುದ್ರಪ್ಪ ತುರ್ಮಂದಿ, ಬೆಳಗಾವಿ ಗ್ರಾಮೀಣ ಸಹ ಕಾರ್ಯದರ್ಶಿಯಾಗಿ ರಾಜು ಮ್ಯಾಕಲಿ ಅವರಿಗೆ ಆದೇಶ ಪತ್ರ ವಿತರಿಸಿ, ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ರಾಜ್ಯಾದ್ಶಕ್ಷ ಮಹೇಶ್ ಶೀಗಿಹಳ್ಳಿ ಪದಾಧಿಕಾರಿಗಳು, ಆಯ್ಕೆಯಾದರು ಸಂಘಟನೆಯು ಜನರ ಒಳಿತಕ್ಕಾಗಿ ಹಾಗೂ ಒಳ್ಳೆಯ ಅಭಿವೃದ್ದಿಗಾಗಿ ಹೋರಾಟ ಮಾಡಲು ಸಿದ್ಧರಿರಬೇಕು ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ್ ಹೆಗ್ಗನಾಯಕ ಮಾತನಾಡಿ ಸರ್ಕಾರದ ಸೌಲಭ್ಯವನ್ನು ಸರಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಸಂಘಟನೆಯ ಧ್ಯೇಯಗಳಾದ ಶಿಕ್ಷಣ, ಸಂಘಟನೆ, ಹೋರಾಟದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕು, ಹೋಬಳಿಗಳಿಂದ ಆಗಮಿಸಿದ ಸಂಘಟನೆಯ ಎಲ್ಲ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.