ಬೆಳಗಾವಿ: ಶಾಸಕರ ಬಳಿ ನಾವು ಪತ್ರ ಪಡೆಯುತ್ತೇವೆ. ನೀವು ಪತ್ರ ನೀಡಿ ಎಂದಾಗ ಅಧಿಕಾರಿಗಳಿಗೆ ವರ್ಗಾವಣೆಗಾಗಿ ನಾವು ಪತ್ರ ನೀಡಿರುತ್ತೇವೆ ಅಷ್ಟೇ. ಹೀಗಾಗಿ ಅಧಿಕಾರಿಗಳ ವರ್ಗಾವಣೆಯ ಸಮಸ್ಯೆ ಇಲ್ಲ. ಈ ಪ್ರಕ್ರಿಯೇ ಸದಾ ನಡೆಯುತ್ತದೆ. ಈ ವಿಷಯದಲ್ಲಿ ಶಾಸಕರ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಬೆಳಗಾವಿ ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯವೆಂದರೇ ಆರೋಪಗಳನ್ನು ಮಾಡುವುದು ಸಹಜ. ಎಲ್ಲ ಅಧಿಕಾರಿಗಳು 4 ವರ್ಷ ಸೇವೆ ಸಲ್ಲಿಸಬೇಕೆಂಬುದು ನಮ್ಮ ಆಶಯ. ಯಾವುದೇ ಅಧಿಕಾರಿಯನ್ನ ಒಂದೇ ವರ್ಷದಲ್ಲಿ ಬದಲಾವಣೆ ಮಾಡುವ ಪದ್ಧತಿ ನಮ್ಮಲ್ಲಿಲ್ಲ. ದೆಹಲಿಯಲ್ಲಿ ಅಧಿಕಾರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದರು.
ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಸಾರ್ವಜನಿಕ ಸೇವಕರೆಂಬ ಭಾವನೆ ನಮ್ಮಲ್ಲಿದೆ. ಅಧಿಕಾರಿಗಳ ವರ್ಗಾವಣೆ ಸಾಮಾನ್ಯ ಗಂಭೀರ ವಿಷಯವಲ್ಲ ಎಂದರು. ಬೈಲಹೊಂಗಲ್ ಎಸಿ ಅವರಿಂದ ಸರ್ಕಾರಿ ಜಮೀನನ್ನು ಖಾಸಗಿ ಜಮೀನು ಎಂದು ಪರಿವರ್ತಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳು ತನಿಖೆ ಮಾಡುತ್ತಾರೆ. ಅಕ್ರಮ ಏಸಗಿದ್ದರೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತಾರೆಂದು ತಿಳಿಸಿದರು