Wednesday, October 15, 2025
Google search engine
Homeಜಿಲ್ಲಾಅಂಬೋಲಿ ಫಾಲ್ಸ್ ಜಲವೈಭವ: ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು
spot_img

ಅಂಬೋಲಿ ಫಾಲ್ಸ್ ಜಲವೈಭವ: ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು

filter: 0; fileterIntensity: 0.0; filterMask: 0; captureOrientation: 0;
algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 43;

ಬೆಳಗಾವಿ: ಪಶ್ಚಿಮಘಟ್ಟದಲ್ಲಿ ಉತ್ತಮ ಮಳೆ ಆಗುತ್ತಿದ್ದು, ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಅದರಲ್ಲೂ ಕಡಿದಾದ ಹಚ್ಚ ಹಸಿರಿನ ಗುಡ್ಡದಿಂದ ಧುಮ್ಮಿಕ್ಕಿ ಹರಿಯುವ ಅಂಬೋಲಿ ಫಾಲ್ಸ್ ಜಲವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಹೌದು, ಮಾನ್ಸೂನ್ ಋತುವಿನಲ್ಲಿ ಪ್ರವಾಸಿಗರ ನೆಚ್ಚಿನ ತಾಣಗಳು ಎಂದರೆ ಜಲಪಾತಗಳು. ಅದರಲ್ಲೂ ಅಂಬೋಲಿ ಫಾಲ್ಸ್ ಪ್ರವಾಸಿಗರ ಪಾಲಿನ ಸ್ವರ್ಗ. ಹಸಿರಿನ ಗುಡ್ಡದಿಂದ ಧುಮ್ಮಿಕ್ಕಿ ಬರುವ ಜಲಧಾರೆ. ಹಾಲ್ನೊರೆಯಂತೆ ಹರಿಯುವ ನೀರಿನ ಜತೆಗೆ ಪ್ರವಾಸಿಗರ ಮೋಜು-ಮಸ್ತಿ. ಸುತ್ತಲೂ ಆವರಿಸಿದ ದಟ್ಟ ಮಂಜು, ಮೇಲೆ ಸುರಿಯುವ ಮಳೆ ನಿಸರ್ಗ ಪ್ರಿಯರಿಗೆ ಆಹ್ಲಾದಕರ ಅನುಭವ ನೀಡುತ್ತದೆ. ಶನಿವಾರ ವೀಕೆಂಡ್ ಹಿನ್ನೆಲೆ ಯುವಕ-ಯುವತಿಯರು ಅಷ್ಟೇ ಅಲ್ಲದೇ ಚಿಕ್ಕ ಮಕ್ಕಳು ಮತ್ತು ವೃದ್ಧರು ಕೂಡ ನಿಸರ್ಗದ ಸವಿ ಸವಿದು ಸಖತ್ ಎಂಜಾಯ್ ಮಾಡಿದರು.

ಪಶ್ಚಿಮಘಟ್ಟದ ಗುಡ್ಡದಲ್ಲಿ ಎತ್ತರವಾದ ಹಸಿರು ತಪ್ಪಲಿನಿಂದ ನೀರು ಚಿಮ್ಮಿ ಕೆಳಗೆ ಹರಿಯುವ ಅಂಬೋಲಿ ಜಲಪಾತದ ಸೌಂದರ್ಯ ಬಣ್ಣಿಸಲಾಗದು. ಈ ಜಲಪಾತದ ದೃಶ್ಯ ವೈಭವ ಮತ್ತು ಪ್ರಕೃತಿ ಸೌಂದರ್ಯವನ್ನು ಸವಿಯಲು ಕೇವಲ ಕರ್ನಾಟಕ ಅಷ್ಟೇ ಅಲ್ಲದೇ ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶ ಸೇರಿ ಮತ್ತಿತರ ರಾಜ್ಯಗಳಿಂದಲೂ ಪ್ರವಾಸಿಗರು ಬರುವುದು ವಿಶೇಷ.

ಅಂಬೋಲಿಗೆ ಹೇಗೆ ತಲುಪಬೇಕು..? ಬೆಳಗಾವಿಯಿಂದ 70 ಕಿ‌.ಮೀ. ಅಂತರದಲ್ಲಿರುವ ಅಂಬೋಲಿ ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಸಾವಂತವಾಡಿ ತಾಲ್ಲೂಕಿನಲ್ಲಿ ಬರುತ್ತದೆ. ಸಾವಂತವಾಡಿಯಿಂದ 31 ಕಿ.ಮೀ. ದೂರದಲ್ಲಿರುವ ಅಂಬೋಲಿಗೆ ಬಹುತೇಕರು ಸ್ವಂತ ವಾಹನದಲ್ಲಿ ಬರುತ್ತಾರೆ. ಅದರಲ್ಲೂ ಬೈಕ್ ಮೇಲೆ ಬರುವ ಪ್ರವಾಸಿಗರೇ ಅಧಿಕ. ಸಾವಂತವಾಡಿ ಮೂಲಕ ಬಸ್ ಮೂಲಕವೂ ಬರಬಹುದು. ಸಾವಂತವಾಡಿಗೆ ರೈಲಿನ ಸಂಪರ್ಕವೂ ಇದೆ. ಬೆಳಗಾವಿಯಿಂದ ಉಚಗಾವ ರಸ್ತೆ, ಶಿನ್ನೊಳ್ಳಿ, ಪಾಟ್ನೆ ಪಾಟಾ, ನಾಗನವಾಡಿ ಮಾರ್ಗವಾಗಿ ಅಂಬೋಲಿ ತಲುಪಬಹುದು.

ಗದಗನಿಂದ ಬಂದಿದ್ದ ಯುವ ಜೋಡಿಗಳು  ಮಾತನಾಡಿ, ಅಂಬೋಲಿ ಫಾಲ್ಸ್ ಬಗ್ಗೆ ಕೇಳಿದ್ದೇವು ಬಂದಿರಲಿಲ್ಲ. ಇದೇ ಮೊದಲ ಬಾರಿ ಇಲ್ಲಿಗೆ ಬಂದಿದ್ದೇವೆ. ಬಹಳ ಚನ್ನಾಗಿದೆ. ನೀರಿನಲ್ಲಿ ನೆನೆದು ಬಹಳಷ್ಟು ಎಂಜಾಯ್ ಮಾಡಿದೇವು. ಮಳೆಗಾಲದಲ್ಲಿ ವೀಕೆಂಡ್ ಗೆ ಪ್ರವಾಸಕ್ಕೆ ಬರಲು ಇದು ಹೇಳಿ ಮಾಡಿಸಿದ ಸ್ಥಳ. ಸಹ್ಯಾದ್ರಿ ಶ್ರೇಣಿಗುಂಟ ದಟ್ಟ ಮಂಜು, ಇಲ್ಲಿನ ವಿವ್ ಪಾಯಿಂಟ್, ಹಚ್ಚ ಹಸಿರಿನ ಸೆರಗನ್ನು ಎಲ್ಲರೂ ಅನುಭವಿಸಿದರೆ ಚೆಂದ ಎಂದು ಅಭಿಪ್ರಾಯ ಪಟ್ಟರು.

ಈ ತರಹ ನಿಸರ್ಗ ಸೌಂದರ್ಯ ಇಲ್ಲಿದೆ ಅಂತಾ ನಮಗೆ ಗೊತ್ತಿರಲಿಲ್ಲ. ಅಂಬೋಲಿ ನಿಜಕ್ಕೂ ಪ್ರವಾಸಿಗರಿಗೆ ಸ್ವರ್ಗ ಸುಖ. ಫುಲ್ ಎಂಜಾಯ್ ಮಾಡಿದೇವು. ಇಲ್ಲಿ ಏನಿದ್ದರೂ ಜಾಲಿ ಜಾಲಿ ಎಂದು ಹರ್ಷ ವ್ಯಕ್ತಪಡಿಸಿದರು ರಾಯಚೂರಿನಿಂದ ಬಂದಿದ್ದ ಯುವಕರು.

ಬೆಳಗಾವಿಯಿಂದ ಬಂದಿದ್ದ ಅಂಜಲಿ ಕೇಳವೇಕರ್ ಮಳೆಗಾಲದಲ್ಲಿ ಈ ಸುಂದರ ಪ್ರಕೃತಿ, ಫಾಲ್ಸ್ ಎಂಜಾಯ್ ಮಾಡೋಕೆ ಎಲ್ಲರೂ ಬರಲೇಬೇಕು. ಇರೋದು ಒಂದೇ ಜೀವನ ಹಾಗಾಗಿ, ಎಂಜಾಯ್ ಮಾಡಬೇಕು. ನಾವು ಪ್ರತಿವರ್ಷವೂ ಅಂಬೋಲಿಗೆ ಬರುತ್ತೇವೆ. ಆದರೆ, ಪ್ರವಾಸಿಗರು ಎಚ್ಚರಿಕೆ ವಹಿಸಬೇಕು. ಹುಚ್ಚಾಟ ಪ್ರದರ್ಶಿಸದೇ ಯಾರಿಗೂ ತೊಂದರೆ ನೀಡದೇ ಪ್ರಕೃತಿಯ ಸೌಂದರ್ಯ‌ ಸವಿಯಬೇಕು ಎಂದರು‌

ಅಂಬೋಲಿ ಸ್ವರ್ಗದಂತೆ ಭಾಸವಾಗುತ್ತಿದೆ. ಗುಡ್ಡದಿಂದ ಬೀಳುವ ನೀರಿನಲ್ಲಿ ನೆನೆದುಕೊಂಡೇ ಡ್ಯಾನ್ಸ್ ಮಾಡಿದೇವು. ನಮ್ಮ ಮನೆಯವರೆಲ್ಲಾ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದೇವು ಎನ್ನುತ್ತಾರೆ ಪಲ್ಲವಿ ಕಾಕತಿಕರ್.

ಉತ್ತರಪ್ರದೇಶದ ಆಗ್ರಾದಿಂದ ಬಂದಿದ್ದ ಕ್ಷಮಾ ಮತ್ತು ದಿವ್ಯಾ ಮಾತನಾಡಿ, ಕೊಲ್ಹಾಪುರದಲ್ಲಿ ಇರುವ ನಮ್ಮ ಅಂಕಲ್ ಅಂಬೋಲಿ ಬಗ್ಗೆ ಹೇಳಿದ್ದರು. ಮಕ್ಕಳೊಂದಿಗೆ ಇಲ್ಲಿಗೆ ಬಂದಿದ್ದೇವೆ. ಇಲ್ಲಿನ ವಾತಾವರಣ ತುಂಬಾ ಚನ್ನಾಗಿದೆ. ಮಕ್ಕಳೂ ಖುಷಿ ಪಟ್ಟರು ಎಂದರು.

RELATED ARTICLES
- Advertisment -spot_img

Most Popular

error: Content is protected !!