ಬೆಳಗಾವಿ: ಹಿರೇಬಾಗೇವಾಡಿ ಸೇರಿ ಹಲವು ಕಡೆ ಕಳಪೆ ಬೀಜ ಪೂರೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನೇಗಿಲ ಯೋಗಿ ಸಂಘಟನೆಯ ರೈತ ಮುಖಂಡ ರವಿ ಪಾಟೀಲ್ ನೇತೃತ್ವದಲ್ಲಿ ಸೋಮವಾರ ಕೃಷಿ ಇಲಾಖೆ ಕಚೇರಿ ಮುಂದೆ ಪ್ರತಿಭಟಿಸಿದರು.
ನಗದರ ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ರೈತರ ಆಕ್ರೋಶ ವ್ಯಕ್ತಪಡಿಸಿದರು.ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ಬೆಳಗಾವಿಯಲ್ಲಿ ಕಳಪೆ ಸೋಯಾಬಿನ್ ಬೀಜ ಪೂರೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.