ಬೆಳಗಾವಿ : ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಮಂಜುನಾಥ ಹಿರೇಮಠ ಅವರನ್ನು ಸೇವೆಯಿಂದ ಅಮಾನತು ಮಾಡಿರುವ ಖಂಡಿಸಿ ಬೆಳಗಾವಿ ಹಿಂದೂಪರ ಸಂಘಟನೆಗಳ ಒಕ್ಕೂಟ ವತಿಂದ ಸೋಮವಾರ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಚೆನ್ನಮ್ಮ ವೃತ್ತದಿಂದ ಜಿಲ್ಲಾ ಕಚೇರಿ ಅವರಿಗೆ ಪ್ರತಿಭಟನಾಕಾರರು ಪ್ರತಿಭಟಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಇತ್ತೀಚಿಗೆ ಹಿಂದೂ ಅಧಿಕಾರಿಗಳ ಮೇಲೆ ಅಮಾನತು ಎಂಬುವುದು ತೂಗುಕತ್ತಿ ಸಹಜವಾಗಿ ಮುಂದುರಿಯುತ್ತಿರುವುದು ಖಂಡನೀಯ. ಮೊನ್ನೆ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದ ಮಸೀದಿಯಲ್ಲಿದ್ದ ಕುರಾನ್ ಪುಸ್ತಕವನ್ನು ಕದ್ದೊಯ್ದ ಕಿಡಿಗೇಡಿಗಳು ಸುಟ್ಟು ಹಾಕಿದ್ದಾರೆ ಆದರೆ ಅನಾರೋಗ್ಯದಿಂದಾಗಿ 15ದಿನದ ರಜೆ ಮೇಲೆ ತೆರಳಿದ್ದ ಸಿಪಿಐ ಮಂಜುನಾಥ ಹಿರೇಮಠ ಅವರನ್ನು ಕರ್ತವ್ಯ ಲೋಪ ಆರೋಪದ ಮೇರೆಗೆ ಸೇವೆಯಿಂದ ಅಮಾನತು ಮಾಡಲಾಗಿದೆ.
ಮೇಲಧಿಕಾರಿ ಈ ಕ್ರಮ ಎಷ್ಟು ಸಮಂಜಸ? ಅಧಿಕಾರಿಗಳ ಈ ಕ್ರಮ ಖಂಡನೀಯವಾಗಿದೆ. ಸಿಪಿಐ ಹಿರೇಮಠ ಅವರ ಮೇಲೆ ಕ್ರಮ ಕೈಗೊಂಡಿರುವುದು ಸರಿಯಲ್ಲ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
ನಾವೂ ಹಿಂದೂಗಳು ಎಂದು ಯಾವ ಸಮಾಜದ ಜೊತೆಗೆ ಜಗಳವಾಡಿದ ಇತಿಹಾಸವಿಲ್ಲ. ಯಾವುದೇ ಧರ್ಮ ಜೊತೆಗೆ ಸಂಘರ್ಷ ಮಾಡಿಲ್ಲ. ಎಲ್ಲ ಧರ್ಮ ಒಂದೇ ಅನ್ನುವವರು ನಾವೂ. ತಪ್ಪಿತಸ್ತರನ್ನೂ ಕೂಡಲೇ ರಾಜ್ಯ ಸರ್ಕಾರ ಸಿ ಪಿ ಐ ಅಮಾನತುಗೊಳಿಸಿರುವ ಆದೇಶ ಹಿಂಪಡೆಯಲೇಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳು ಉಗ್ರ ಹೋರಾಟ ಮಾಡಬೇಕು ಆಗುತ್ತದೆ ಎಂದು ಎಚ್ಚರಿಸಿದರು.